ಗುತ್ತಗಾಡು: ಕಿನ್ನಿಗೋಳಿ ಗುತ್ತಗಾಡು ಕೊಲ್ಲೂರುಪದವು ಮುಖ್ಯರಸ್ತೆಯ ಪೊಯಿಮನ್ ಬಳಿ ರಸ್ತೆ ಅಂಚಿನಲ್ಲಿರುವ ಕೆರೆಗೆ ನಿರ್ಮಿಸಿದ ತಡೆಗೋಡೆ ಕುಸಿತವಾಗಿದ್ದು, ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಗುತ್ತಗಾಡುವಿನಿಂದ ಕೊಲ್ಲೂರು ಪದವು ಮೂಲಕ ಸಚ್ಚೇರಿಪೇಟೆ, ಬೆಳ್ಮಣ್ಣು, ಕಾರ್ಕಳ, ಉಡುಪಿ, ಮುಲ್ಕಿ ಕಡೆಗೆ ಸಮೀಪದ ದಾರಿಯಾಗಿದ್ದು, ಭಾರಿ ಮಳೆಗೆ ತಡೆಗೋಡೆ ಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.
ಈ ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿದ್ದು, ತಡೆಗೋಡೆ ಪಕ್ಕದಲ್ಲಿ ಕೆರೆಗೆ ದುಷ್ಕರ್ಮಿಗಳು ತ್ಯಾಜ್ಯ ತಂದು ಬಿಸಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯರು ಪಂಚಾಯಿತಿಗೆ ದೂರು ನೀಡಿದ್ದಾರೆ.
ತಡೆಗೋಡೆ ಕುಸಿತದ ಬಗ್ಗೆ ಮಾಹಿತಿ ಪಡೆದ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ, ಕೂಡಲೇ ಕಾರ್ಯಪ್ರವೃತ್ತರಾಗಿ ಪರಿಶೀಲನೆ ನಡೆಸಿ, ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದಾರೆ. ಮಳೆ ಕಡಿಮೆಯಾದ ಬಳಿಕ ತಡೆಗೋಡೆ ದುರಸ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.
Kshetra Samachara
09/07/2022 03:09 pm