ಹಾಲಾಡಿ: ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ರೂ ಅನೇಕ ಮೂಲಭೂತ ಸೌಕರ್ಯವಿಲ್ಲದ ಕಾರಣ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಇದೀಗ ಅಮಾಸೆಬೈಲ್ ಸಮೀಪದ 60 ವರ್ಷಗಳ ಇತಿಹಾಸವಿರುವ ನಡಂಬೂರು ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಕಳೆದ 2 ವರ್ಷಗಳಿಂದ ಯಾವುದೇ ಖಾಯಂ ಶಿಕ್ಷಕರಿಲ್ಲದೆ ವಾರಕ್ಕೆ 3 ದಿನ ಶಿಕ್ಷಕರನ್ನು ನಿಯೋಜನೆ ಮಾಡಿ ಪಾಠ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಅನೇಕ ಮಕ್ಕಳು ಇಲ್ಲಿಗೆ ಬರುತ್ತಿದ್ದು ಮುಂಬರುವ ದಿನಗಳಲ್ಲಿ ಇದೆ ರೀತಿಯಾದರೆ ನಡಂಬೂರು ಶಾಲೆಗೆ ಬೀಗ ಬೀಳುವ ಭೀತಿ ಎದುರಾಗುತ್ತದೆ.
Kshetra Samachara
07/04/2022 08:04 am