ಮೂಡುಬಿದಿರೆ: ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರ ಬೆಳುವಾಯಿ ಇದರ ಆಶ್ರಯದಲ್ಲಿ ಬರುವ 12 ಸರಕಾರಿ ಶಾಲೆಗಳ ಎಸ್ ಡಿ ಎಂಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರ್ ಇಲ್ಲಿನ ವಿಶ್ವವಿದ್ಯಾಲಯ ಘಟಕ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಸಂಯೋಜಕರಾದ ಶಶಿಕಲಾ ಉದ್ಘಾಟಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸುಚಿತ್ರ ಗೊನ್ಸಾಲ್ವಿಸ್ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮಾಹಿತಿ ನೀಡಿದರು.ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶಾಲೆಗಳಲ್ಲಿ ಕೈಗೊಂಡ ನಿರ್ಣಯ ಮತ್ತು ಶಾಲೆಗಳ ಯಶೋಗಾಥೆಯನ್ನು ಮಂಡಿಸಿದರು.
ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ಸುದೀಪ್ ರವರು ಅಪರಾಧ ತಡೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು. ವೇದನ್ ಟ್ರಸ್ಟ್ ಬೆಂಗಳೂರು ಇದರ ಮೂಡುಬಿದಿರೆ ವಲಯ ಸಂಯೋಜಕಿ ಕುಮಾರಿ ಸುಹಾಸಿನಿ ಇವರು ಸ್ವಚ್ಛ ವಿದ್ಯಾಲಯದ ಬಗ್ಗೆ ಮಾಹಿತಿ ನೀಡಿದರು.
ಪಾಡ್ಯಾರ್ ಶಾಲೆಯ ಮುಖ್ಯಶಿಕ್ಷಕ ವಾಸುದೇವ ಆಚಾರ್ ಸ್ವಾಗತಿಸಿದರು.ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಸನ್ನ ವಿ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Kshetra Samachara
22/02/2022 08:46 pm