ಪುತ್ತೂರು: ಸರಕಾರಿ ಕಛೇರಿಗಳಲ್ಲಿ ದುಡಿಯುತ್ತಿರುವ ನೌಕರರು ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ವರ್ಗಾವಣೆಯಾಗಿ ಹೋಗೋದು ಸಹಜ. ಜನಸಾಮಾನ್ಯನಿಗೆ ತೊಂದರೆಯಾಗದ ರೀತಿಯಲ್ಲಿ ಈ ವರ್ಗಾವಣೆ ಪ್ರಕ್ರಿಯೆ ನಡೆದರೆ ಯಾವುದೇ ತೊಂದರೆಯಿಲ್ಲ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಕಛೇರಿಯಲ್ಲಿ ನಡೆಯುತ್ತಿರುವ ನೌಕರರ ವರ್ಗಾವಣೆ ಹೊರೆ ಎಲ್ಲರ ಮೇಲಾಗುತ್ತಿದೆ.
ಉತ್ತರ ಕರ್ನಾಟಕ ಭಾಗದ ನೌಕರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದಲ್ಲಿ ಸ್ಥಳೀಯ ಉದ್ಯೋಗಿಗಳ ಕೊರತೆ ಹಿನ್ನಲೆಯಲ್ಲಿ ವರ್ಗಾವಣೆಯಾಗಿ ಹೋದ ಸಿಬ್ಬಂದಿಗಳ ಜಾಗಕ್ಕೆ ಬೇರೆ ಸಿಬ್ಬಂದಿಗಳು ಹಾಜರಾಗದ ಹಿನ್ನಲೆಯಲ್ಲಿ ಘಟಕ ಸಂಕಷ್ಟಕ್ಕೆ ಸಿಲುಕಿದೆ.
ಕೊಡಗು, ಸುಳ್ಯ, ಬಂಟ್ವಾಳ,ಪುತ್ತೂರು, ಧರ್ಮಸ್ಥಳ ಘಟಕಗಳನ್ನು ಹೊಂದಿರುವ ಪುತ್ತೂರು ವಿಭಾಗೀಯ ಕಛೇರಿಯ ನೂರಾರು ಚಾಲಕ ಹಾಗೂ ಕಂಡಕ್ಟರ್ ಗಳು ತಮ್ಮ ತಮ್ಮ ಜಿಲ್ಲೆಗಳಿಗೆ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ.
ಈ ಘಟಕದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಇತರ ಭಾಗದ ಸಿಬ್ಬಂದಿಗಳೇ ಕರ್ತವ್ಯದಲ್ಲಿದ್ದು, ಬೇರೆ ಜಿಲ್ಲೆಗಳಿಂದ ಪುತ್ತೂರು ಘಟಕಕ್ಕೆ ಬರುವ ಯಾವುದೇ ಸಿಬ್ಬಂದಿಗಳು ಇಲ್ಲದ ಕಾರಣ ಘಟಕದಲ್ಲಿ ಬಸ್ ಸೇವೆ ನಿರ್ವಹಿಸುವುದೇ ಕಷ್ಟ ಸಾಧ್ಯವಾಗಿದೆ.
ಸುಮಾರು 10 ಬಸ್ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ದೂರದೂರುಗಳಿಗೆ ತೆರಳುವ ಬಸ್ ಸಂಚಾರಕ್ಕೆ ತೊಂದರೆಯಾಗಿದೆ
Kshetra Samachara
04/02/2022 03:40 pm