ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ʼಸ್ಮಾರ್ಟ್‌ ಸಿಟಿ ಕಾಮಗಾರಿʼ; ತಳ ಸೇರಿದ್ದ ಹಳೆಬಾವಿ ಪ್ರತ್ಯಕ್ಷ!

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಈಗ ನಗರದ ನಾನಾ ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಈ ಹಿಂದೆ ಹೀಗೆ ಕಾಮಗಾರಿ ನಡೆಯುತ್ತಿರುವಾಗ ಹಂಪನಕಟ್ಟೆಯಲ್ಲಿ ಬಾವಿ, ಕೊಡಿಯಾಲ್ ಬೈಲ್ ವೃತ್ತದ ಬಳಿ ಹಾಗೂ ಬೋಳಾರದಲ್ಲಿ ಬಾವಿ ಪತ್ತೆಯಾಗಿತ್ತು. ಇದೀಗ ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆ ಪಕ್ಕದಲ್ಲೇ ಬಾವಿಯೊಂದು ಪತ್ತೆಯಾಗಿದೆ!

ಸುಮಾರು 15 ಅಡಿ ಆಳದ ಬಾವಿಯಲ್ಲಿ ಸ್ವಚ್ಛ ನೀರಿದೆ. ಈ ಬಾವಿಯನ್ನು ಅಭಿವೃದ್ಧಿ ಪಡಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ 1918ರ ಸುಮಾರಿಗೆ 18 ಬಾವಿಗಳನ್ನು ಮಂಗಳೂರು ಮುನ್ಸಿಪಾಲಿಟಿ ಕೊರೆದಿತ್ತು. ಕಾಲಕ್ರಮೇಣ ಮನೆ- ಮನೆಗೆ ಪೈಪ್‌ ನಿಂದಲೇ ನೀರು ಬಂದ ಬಳಿಕ ಬಾವಿ ಉಪಯೋಗ ಶೂನ್ಯವಾಯಿತು. ಡೊಂಗರಕೇರಿಯ ಈ ಬಾವಿ ಇದ್ದ ಪರಿಸರದಲ್ಲಿ ಹಿಂದೆ ನೀರಿನ ತೀವ್ರ ಅಭಾವದ ಸಂದರ್ಭ ಅಂದರೆ ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿಈ ಬಾವಿನೀರನ್ನೇ ಉಪಯೋಗಿಸಲಾಗುತ್ತಿತ್ತು.

Edited By : Manjunath H D
Kshetra Samachara

Kshetra Samachara

19/01/2022 04:27 pm

Cinque Terre

5.8 K

Cinque Terre

0

ಸಂಬಂಧಿತ ಸುದ್ದಿ