ಬಜಪೆ:ಕಟೀಲು ಸಮೀಪದ ಅಜಾರು ವಿನಿಂದ ನಿಡ್ಡೋಡಿ ಮೂಲಕ ಮೂಡಬಿದಿರೆಗೆ ಸಂಪರ್ಕಿಸುವ ಕಟೀಲು ಜಲಕದ ಕಟ್ಟೆಯ ತಿರುವಿನಿಂದ ಕೂಡಿದ ರಸ್ತೆಯು ವಾಹನ ಸವಾರರಿಗೆ ಬಹಳಷ್ಟು ಅಪಾಯಕಾರಿಯಾಗಿದೆ.ಕಟೀಲು ಅಜಾರುವಿನಿಂದ ನಿಡ್ಡೋಡಿ ಮೂಲಕ ಮೂಡಬಿದಿರೆ ಹಾಗೂ ಇನ್ನಿತರ ಕಡೆಗಳಿಗೆ ತೀರ ಹತ್ತಿರದ ಸಂಪರ್ಕ ರಸ್ತೆ ಇದಾಗಿದೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಘನ ಹಾಗೂ ಲಘು ವಾಹನಗಳು ಸಂಚಾರವನ್ನು ನಡೆಸುತ್ತದೆ.ರಸ್ತೆಯ ಅಜಾರುವಿನಿಂದ ಜಲಕದ ಕಟ್ಟೆ ತನಕದ ರಸ್ತೆಯು ತೀರ ಇಕ್ಕಟು ಹಾಗೂ ತೀರಾ ತಿರುವಿನಿಂದ ಕೂಡಿದ ರಸ್ತೆಯಾಗಿದ್ದು,ವಾಹನ ಸವಾರರ ಪಾಲಿಗೆ ಅಪಾಯಕಾರಿಯಾಗಿದೆ.ರಸ್ತೆಯಲ್ಲಿ ಘನ ವಾಹನಗಳು ಬಂತೆಂದರೆ ಲಘು ವಾಹನಗಳ ಸವಾರ ರ ಪಾಡಂತು ಹೇಳತೀರದು.ಘನ ವಾಹನಗಳು ಬಂದರೆ ರಸ್ತೆಯ ಅಂಚಿಗೆ ವಾಹನಗಳನ್ನು ಸರಿಯುದು ಕೂಡ ಕಷ್ಟಕರವಾಗಿದೆ.ಕೆಲ ವರ್ಷಗಳ ಹಿಂದೆ ಈ ರಸ್ತೆಯು ಜಲಕದ ಕಟ್ಟೆ ತನಕ ಮಾತ್ರ ಆಗಲೀಕರಣ ಗೊಂಡಿತ್ತು.
ಆದರೆ ಜಲಕದ ಕಟ್ಟೆ ಸಮೀಪದಿಂದ ಅಜಾರು ತನಕದ ರಸ್ತೆ ಮಾತ್ರ ಆಗಲೀಕರಣ ಗೊಳ್ಳಲಿಲ್ಲ.ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಸಮಸ್ಯೆಯಾಗಿದೆ.ದಿನಂಪ್ರತಿ ಸಂಚರಿಸುವಂತಹ ವಾಹನ ಸವಾರರು ಹೆಚ್ಚಿನ ಜಾಗರೂಕತೆಯನ್ನು ವಹಿಸುವುದು ಸೂಕ್ತ ಹಾಗೂ ರಸ್ತೆಯ ತಿರುವನ್ನು ನೇರ ರಸ್ತೆಯನ್ನು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
15/01/2022 07:58 pm