ಕೋಟ: ಕೋಟತಟ್ಟು ಪಡುಕರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಿಶ್ ಕಟ್ಟಿಂಗ್ ಘಟಕಕ್ಕೆ ಪರ ವಿರೋಧ ಎದುರಾಗಿದೆ. ಇಲ್ಲಿನ ಗ್ರಾಮಸ್ಥರು ಘಟಕವನ್ನು ವಿರೋಧಿಸಿದರೆ, ಘಟಕದ ಕಾರ್ಮಿಕರು ಮಾತ್ರ ಇದು ನಮಗೆ ಬೇಕು ಎನ್ನುತ್ತಿದ್ದಾರೆ.
ಘಟಕವು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ಇದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಬುಧವಾರ ಪ್ರತಿಭಟಿಸಿದ್ದು, ಕೋಟತಟ್ಟು ಗ್ರಾ.ಪಂ. ಮಧ್ಯಪ್ರವೇಶಿಸಿ ಘಟಕ ಕಾರ ನಿರ್ವಹಿಸದಂತೆ ಸೂಚನೆ ನೀಡಿತ್ತು. ಆದರೆ ಇದೇ ಘಟಕದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಕಾರ್ಮಿಕರು ನಿನ್ನೆಯಿಂದ ಬೇಡಿಕೆ ಮುಂದಿಟ್ಟಿದ್ದಾರೆ.
ಯಶಸ್ವಿನಿ ಫಿಶ್ ಕಟ್ಟಿಂಗ್ ಘಟಕವು ಈ ಹಿಂದೆ ಹಂಗಾರಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ತಾಂತ್ರಿಕ ಕಾರಣದಿಂದ ಪಡುಕರೆಗೆ ಶಿಫ್ಟಾಗಿದೆ. ಇದೀಗ ಇಲ್ಲಿ ಪರವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಉನ್ನತ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದಾರೆ.ಸ್ಥಳೀಯರು ಪರಿಸರ ಹಾಳಾಗುವ ಕಾರಣ ಮುಂದಿಟ್ಟು ವಿರೋಧಿಸಿದರೆ, ಕಾರ್ಮಿಕರು ತಮಗೆ ಉದ್ಯೋಗಾವಕಾಶ ಸಿಗುತ್ತದೆ. ಹಾಗಾಗಿ ಘಟಕ ಬೇಕು ಎಂದಿದ್ದಾರೆ. ಮುಂದೇನಾಗುತ್ತದೋ ಕಾದು ನೋಡಬೇಕು.
Kshetra Samachara
12/08/2022 11:19 am