ಕರಾವಳಿ ಭಾಗದ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಯಾಗಿ ಸೀ ವೇವ್ ಬ್ರೇಕರ್ ಕಾಮಗಾರಿಯನ್ನು ನಡೆಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಉಡುಪಿ ಮಣಿಪಾಲದ ರಜತಾದ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಸರಗೋಡಿನ ನೆಲ್ಲಿಕುನ್ನು ಎಂಬಲ್ಲಿ ಈ ಕಾಮಗಾರಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅಲ್ಲಿ ಕಾಮಗಾರಿ ನಡೆಸಿರುವವರನ್ನು ಉಳ್ಳಾಲದ ಬೆಟ್ಟಂಪಾಡಿ ಭಾಗಕ್ಕೆ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿದ್ದೆವು. ಸ್ಥಳೀಯ ಪರಿಸ್ಥಿಗತಿಗಳನ್ನು ತಿಳಿದುಕೊಂಡು ಸಮುದ್ರದ ಬಂಡೆಯನ್ನು ಹೋಳು ಮಾಡಿಕೊಂಡು ಕಾಮಗಾರಿಯನ್ನು ಪ್ರಾರಂಭ ಮಾಡುತ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಈ ಕಾಮಾಗಾರಿಯ ಕುರಿತು ತಜ್ಞರ ಅಭಿಪ್ರಾಯ ಪಡೆದು ವರದಿ ನೀಡಲು ಈಗಾಗಲೇ ಸೂಚನೆ ನೀಡಿದ್ದಾರೆ ಎಂದರು. ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಶಾಸಕ ರಘುಪತಿ ಭಟ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
07/07/2022 01:13 pm