ಮಂಗಳೂರು: ಕೋವಿಡ್ ಕಾರಣದಿಂದಾಗಿ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕಾಸರಗೋಡು ಬಸ್ ಸಂಚಾರ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಮಂಗಳೂರು ಕೇಂದ್ರ ನಿಲ್ದಾಣದಿಂದ ಒಟ್ಟು 24 ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳು ಓಡಾಟ ಅರಂಭಿಸಿದೆ.
ಈ ಹಿಂದೆ ಕರ್ನಾಟಕದಿಂದ ಕಾಸರಗೋಡಿಗೆ ಬಸ್ ಸಂಚಾರಿಸಲು ಯಾವುದೇ ನಿರ್ಬಂಧವಿಲ್ಲದ್ದಿದ್ದರೂ ಕೋವಿಡ್ ಸಂದರ್ಭದಲ್ಲಿ ಕೇರಳ ಸರಕಾರ ಅನುಮತಿ ನಿರಾಕರಿಸಿತ್ತು. ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿತ್ತು.ಇದೀಗ ಕೇರಳ ಸರಕಾರ ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಇಂದಿನಿಂದ ಅಂತರ್ ರಾಜ್ಯಗಳ ನಡುವೆ ಬಸ್ಸುಗಳ ಓಡಾಟ ಆರಂಭಗೊಂಡಿದೆ.
Kshetra Samachara
16/11/2020 12:28 pm