ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಅರವತ್ತು ವರ್ಷಗಳಿಂದ ಶೌಚಾಲಯದ ಭಾಗ್ಯ ಕಾಣದೆ ಕಂಗೆಟ್ಟು ಹೋಗಿದೆ. ರಾಜ್ಯದ ಎರಡು ಪ್ರಭಾವಿ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪಂಚಾಯಿತಿ ಅಧ್ಯಕ್ಷರಾಗಿ ಸಾಕಷ್ಟು ಜನ ಆಯ್ಕೆಯಾಗಿದ್ದಾರೆ,ಈ ಎರಡು ಪಕ್ಷದವರು ಪಂಚಾಯಿತಿಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದಾರೆ, ಆದರೆ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ 6ರಿಂದ 10 ಹಳ್ಳಿಗಳನ್ನು ಆಜ್ರಿ ಹರ ಕೇಂದ್ರೀಕರಿಸುತ್ತದೆ, ರಾಮನ ಕೋಡ್ಲು, ಬೆಳ್ಳಾಳ, ಎಳಬೇರು, ಗೊಂಜಾಡಿ, ಬೆಳ್ಳವಾಣ, ಕುದುರೆ ಬೇರು ಕಟ್ಟೆ, ಹೀಗೆ ಸಾಕಷ್ಟು ಹಳ್ಳಿಗಳಿಂದ ಜನ ಆಜ್ರಿಯನ್ನ ಅವಲಂಬಿತವಾಗಿದ್ದಾರೆ.
ಆಜ್ರಿ ಸರಕಾರಿ ಶಾಲೆ,ಹಾಗೂ ಮಾನಂಜೆ ವ್ಯವಸಾಯ ಸಹಕಾರಿ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹೀಗೆ ಎಲ್ಲ ರೀತಿಯ ಅನುಕೂಲವಾಗುವ ಅಂಗಡಿ-ಮುಂಗಟ್ಟುಗಳು ಈ ಗ್ರಾಮದಲ್ಲಿ ಸಿಗುತ್ತದೆ, ಆದರೆ ಮಹಿಳೆಯರು ಮಕ್ಕಳು ಮತ್ತು ಪ್ರಯಾಣಿಕರಿಗೆ ಕನಿಷ್ಠ ಮೂಲ ಸೌಕರ್ಯ ವಾದ ಒಂದು ಶೌಚಾಲಯದ ವ್ಯವಸ್ಥೆ ಇಲ್ಲಿ ಇಲ್ಲ, ಪಂಚಾಯ್ತಿ ಆಡಳಿತದಲ್ಲಿ ಸಾಕಷ್ಟು ಘಟಾನುಘಟಿ ಅಧ್ಯಕ್ಷರು ಬಂದು ಹೋಗಿದ್ದಾರೆ , ಆದರೆ ಸಾಮಾನ್ಯ ಜ್ಞಾನವಾದ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವ ಗೋಜಿಗೆ ಹೋಗದಿರುವುದು ವಿಪರಿಹಾಸ.
ಅಭಿವೃದ್ಧಿಯ ಹರಿಕಾರರ ಗಮನಕ್ಕೆ ಬರದ ಗ್ರಾಮ ಪಂಚಾಯಿತಿಯ 200 ಮೀಟರ್ ಹತ್ತಿರದಲ್ಲೇ ಒಂದು ಶೌಚಾಲಯ ಆಗದಿರುವುದು ಬೇಸರದ ಸಂಗತಿ,ಈ ಪಂಚಾಯಿತಿ ಆಡಳಿತಕ್ಕೆ ಸಾರ್ವಜನಿಕರ ಶೌಚಾಲಯ ಇದವರೆಗೂ ಗಮನಕ್ಕೆ ಬರಲಿಲ್ಲವಾ ಅಥವಾ ಯಾಕೆ ಬೇಕು ಎನ್ನುವ ಅಸಡ್ಡೆ ಇದಿಯಾ ತಿಳಿಯುತ್ತಿಲ್ಲ, ಎನ್ನುತ್ತಾರೆ ಗ್ರಾಮಸ್ಥರು, ಆಜ್ರಿ ಗ್ರಾಮದಲ್ಲಿ ಸಾಕಷ್ಟು, ಜನಸಂಖ್ಯೆ ದಟ್ಟವಾಗುತ್ತಿದೆ ಚೋನಮನೆ ಶನೀಶ್ವರ ಮತ್ತು ಶಿನ್ನಾಲೆ ಮಾಲಿಂಗೇಶ್ವರ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಹರಿದುಬರುತ್ತಿದೆ ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲ ಸೌಕರ್ಯದ ವ್ಯವಸ್ಥೆ ಆಗಬೇಕಾಗಿದೆ ಇನ್ನಾದರೂ ಬೈಂದೂರು ಶಾಸಕ ಸುಕುಮಾರ ಶೆಟ್ರು ಇತ್ತ ಕಡೆ ಗಮನ ಹರಿಸಿ ಅಭಿವೃದ್ಧಿಯತ್ತ ಸಾಗುತ್ತಿರುವ ಆಜ್ರಿ ಗ್ರಾಮಕ್ಕೆ ಸಾರ್ವಜನಿಕ ಶೌಚಾಲಯ ಒದಗಿಸಿಕೊಡಿ ಅನ್ನೋದು ನಮ್ಮ ಆಶಯ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
07/11/2020 06:15 pm