ಬ್ರಹ್ಮಾವರ: ಬಾರಕೂರು ನ್ಯಾಷನಲ್ ಪದವೀ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕ ವೈ. ಮೋಹನ್ ರಾವ್ ಬರೆದ ನಿತ್ಯೋತ್ಸವ ಕಂಡ ಬಾರಕೂರು ಕೃತಿಯನ್ನು ಶನಿವಾರ ಬಾರಕೂರು ರೋಟರಿ ಸಭಾ ಭವನದಲ್ಲಿ ವಿಶ್ರಾಂತ ಪ್ರಿನ್ಸಿಪಾಲ್ ಬಿ, ಸೀತಾರಾಮ ಶೆಟ್ಟಿ ಅನಾವರಣಗೊಳಿಸಿದರು.
ಕೃತಿ ಪರಿಚಯ ಮಾಡಿದ ಡಾ, ಬಿ ಜಗದೀಶ್ ಶೆಟ್ಟಿ ಮಾತನಾಡಿ ಇತಿಹಾಸದಲ್ಲಿ ಬಾರಕೂರು ಮತ್ತು ಮಂಗಳೂರು ಜಿಲ್ಲೆಯಾಗಿತ್ತು ಅದನ್ನು ಪುಸ್ತಕ ರೂಪದಲ್ಲಿ ದಾಖಲೆ ಸಹಿತ ಮಾಡಿದ ಕಾರ್ಯ ಶ್ಲಾಘನೀಯ.
ಬಾರಕೂರಿನ ಕುರಿತು ಈ ತನಕ ಲೇಖನ ರೂಪದಲ್ಲಿ ಮಾತ್ರ ಕಂಡು ಬಂದಿದ್ದು, ಇಲ್ಲಿನ ದೇವಸ್ಥಾನ, ಕೋಟೆ, ಶಿಲಾ ಶಾಸನ ಸೇರಿದಂತೆ 237 ಪುಟದ ಸಮಗ್ರ ಮಾಹಿತಿಯೊಂದಿಗೆ 400 ಚಿತ್ರಗಳನ್ನು ಬಳಸಿ ಪುಸ್ತಕ ರೂಪದಲ್ಲಿ ಬಂದಿರುವುದು ಮುಂದಿನ ಜನಾಂಗಕ್ಕೆ ಲೇಖಕರು ಬಾರಕೂರಿನ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದರು.
ಪುಸ್ತಕರಚನೆಗೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಬಾರಕೂರು ಶಾಂತಾರಾಮ ಶೆಟ್ಟಿ, ನಾಡೋಜ ಡಾ ಜಿ ಶಂಕರ , ಕೊಟ್ರಸ್ವಾಮಿ, ಬನ್ನಂಜೆ ಬಾಬು ಅಮೀನ್, ನಿತ್ಯಾನಂದ ಪಡ್ರೆ, ನಂದಳಿಕೆ ಬಾಲಚಂದ್ರ ರಾವ್, ಐರೋಡಿ ಮಂಜುನಾಥ್ ಕುಲಾಲ್, ಗಣೇಶ್ ಕಾಂಚನ್, ಧೀರಜ್ ಉಪಸ್ಥಿತರಿದ್ದರು.
Kshetra Samachara
25/09/2022 02:30 pm