ಉಡುಪಿ: ಇಂದಿನ ಆಧುನಿಕ ಬದುಕಿನಲ್ಲಿ ಕೈಮಗ್ಗದಿಂದ ತಯಾರಿಸಿದ ಸೀರೆ ಮತ್ತಿತರ ಬಟ್ಟೆಗಳು ಬಹುತೇಕ ನಶಿಸುತ್ತಾ ಬಂದಿವೆ. ಅವುಗಳಿಗೆ ಮತ್ತೆ ಪುನರುಜ್ಜೀವನ ನೀಡಿ ನೇಕಾರಿಕೆ ವೃತ್ತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಉಡುಪಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದುವೇ ಕೈಮಗ್ಗ ವಸ್ತ್ರಗಳ ಫ್ಯಾಶನ್ ಶೋ.
ಕಲ್ಯಾಣಪುರದ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದ ಸಭಾಂಗಣ ಇದಕ್ಕೆ ಸಾಕ್ಷಿಯಾಯಿತು. ಈ ಸಂದರ್ಭ ನೇಕಾರ ಸಮುದಾಯದ ಸಾಧಕರನ್ನು ಹಾಗೂವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬಳಿಕ ಕೈಮಗ್ಗದಿಂದ ತಯಾರಿಸಿದ ವಸ್ತ್ರಗಳ ಫ್ಯಾಷನ್ ಶೋ ನಡೆಯಿತು. ಮಹಿಳೆಯರು ಹಾಗೂ ಯುವತಿಯರು ಕೈಮಗ್ಗದ ಉಡುಪಿ ಸೀರೆಗಳನ್ನುಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಪುರುಷರು ಕೂಡ ಕೈಮಗ್ಗದ ವಸ್ತ್ರ ಧರಿಸಿ ಗಮನ ಸೆಳೆದರು.
Kshetra Samachara
11/08/2022 04:45 pm