ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ:ಆವೆ ಮಣ್ಣು ದಂಧೆ: ಗುತ್ತಿಗೆದಾರರಿಂದಲೇ ಮಣ್ಣು ತೆರವು ಮಾಡಿಸಿದ ಗ್ರಾಮಸ್ಥರು!

ಕೋಟ: ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಗಿಳಿಯರು 4ನೇ ವಾರ್ಡ್ ನ ಬೆಟ್ಲಕ್ಕಿ ಗ್ರಾಮದಲ್ಲಿ ಅಕ್ರಮ ಆವೆ ಮಣ್ಣು ದಂಧೆ ಜೋರಾಗಿದೆ.ಖಾಸಗಿ ವ್ಯಕ್ತಿಗಳು ಇಲ್ಲಿ ವಾರಾಹಿ ನೀರು ಹರಿಯುವ ತೋಡನ್ನು ಮುಚ್ಚಿದ್ದು ,ಸಾರ್ವಜನಿಕರು ದೂರು ನೀಡಿ ಅವರಿಂದಲೇ ತೆರವು ಕಾರ್ಯ ನಡೆಸಿದ್ದಾರೆ.

ನರೇಗಾ ಯೋಜನೆ ಮೂಲಕ ವಾರಾಹಿ ನೀರು ಹರಿಯುವ ತೋಡಿನಿಂದ ಹೂಳು ತೆಗೆಯುವ ಕಾರ್ಯ ನಡೆದಿದ್ದು. ಅದರಿಂದಾಗಿ ಮುಂದೆ 3 ಕಿ ಮೀ ದೂರದವರೆಗೆ ಹರಿಯುವ ನೀರಿಂದ ಸಾರ್ವಜನಿಕರಿಗೆ ಕುಡಿಯುವ ನೀರು, ಕೃಷಿಕರಿಗೆ, ರೈತರಿಗೆ ಅನುಕೂಲವಾಗುತಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಗುತ್ತಿಗೆದಾದರು ಅಕ್ರಮವಾಗಿ ಆವೆ ಮಣ್ಣು ತೆಗೆಯುವ ಉದ್ದೇಶದಿಂದ ಅನಧಿಕೃತ ರಸ್ತೆಯನ್ನು ನಿರ್ಮಿಸಿ

ವಾರಾಹಿ ನೀರು ಹರಿಯುವ ತೋಡನ್ನು ಗ್ರಾಮ ಪಂಚಾಯಿತ್ ಗಮನಕ್ಕೆ ತರದೆ ಅನಧಿಕೃತವಾಗಿ ಮುಚ್ಚಿದ್ದರು.ಈ ಸಂಬಂಧ ಸ್ಥಳೀಯರು ಆಕ್ರೋಶಗೊಂಡು ಕೋಟ ಗ್ರಾಮ ಪಂಚಾಯಿತ್ ಗೆ ದೂರು ನೀಡಿದ್ದರು.

ಸಾರ್ವಜನಿಕರ ದೂರಿನನ್ವಯ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಗ್ರಾಮಲೆಕ್ಕಾಧಿಕಾರಿ ಚೆಲುವರಾಜ್, ಹಾಗೂ ವಾರ್ಡ್ ಸದಸ್ಯೆ, ಮತ್ತು ಪಂಚಾಯಿತಿ ಸದಸ್ಯರು ಸ್ಥಳಕ್ಕಾಗಮಿಸಿ ನೀರು ಹರಿಯುವ ತೋಡನ್ನು ಪರಿಶೀಲಿಸಿ ಖಾಸಗಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಅವರ ಕೈಯಿಂದಲೇ ಜೇಸಿಬಿ ಮೂಲಕ ಮುಚ್ಚಿದ ತೋಡನ್ನು ತೆರವು ಗೊಳಿಸಲಾಯಿತು.

Edited By : Manjunath H D
Kshetra Samachara

Kshetra Samachara

07/02/2022 05:20 pm

Cinque Terre

11.01 K

Cinque Terre

0

ಸಂಬಂಧಿತ ಸುದ್ದಿ