ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ಕಾರ್ಯಾಚರಣೆ : ಎಸ್ ಡಿಪಿಐ ಜಿಲ್ಲಾಧ್ಯಕ್ಷರ ಅಕ್ರಮ ಹೋಟೆಲ್ ತೆರವು !

ಉಡುಪಿ: ಉಡುಪಿ ನಗರದಲ್ಲಿಯ ಅಕ್ರಮ ಹೊಟೇಲ್ ಗಳ ತೆರವು ಕಾರ್ಯಾಚರಣೆಯನ್ನು ಇಂದು ಬೆಳ್ಳಂಬೆಳಿಗ್ಗೆ ನಗರಸಭೆ ಕೈಗೆತ್ತಿಕೊಂಡಿದೆ. ನಗರದ ಜಾಮಿಯಾ ಮಸೀದಿ ಮುಂಭಾಗದ ಕಾಂಪ್ಲೆಕ್ಸ್ ನಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷರು ಕಾನೂನು ಬಾಹಿರವಾಗಿ ಹೊಟೇಲ್ ನಡೆಸುತ್ತಿದ್ದರು.

ಈ ಸಂಬಂಧ ಹೊಟೇಲ್ ಮಾಲೀಕರಿಗೆ ನೊಟೀಸ್ ಕೂಡ ನೀಡಲಾಗಿತ್ತು.ನೊಟೀಸ್ ನೀಡಿದ್ದರೂ ತೆರವುಗೊಳಿಸದ ಕಾರಣ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿದ್ದಾರೆ.

ಈ ವೇಳೆ ಸ್ವತಃ ಹೊಟೇಲ್ ಮಾಲೀಕರೇ ಹೊಟೇಲ್ ತೆರವು ಮಾಡಿದ್ದಾರೆ. ಎಸ್ ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಮತ್ತವರ ಸಹೋದರ ಈ ಕಾಂಪ್ಲೆಕ್ಸ್ ನಲ್ಲಿ ಎರಡು ಹೊಟೇಲ್ ನಡೆಸುತ್ತಿದ್ದರು. ಅಂದಹಾಗೆ ಈ ಸಹೋದರರು ಹಿಜಾಬ್ ಹೋರಾಟದಲ್ಲಿ ಎಸ್ ಡಿಪಿಐ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದರು ಎನ್ನುವ ಆರೋಪ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : Manjunath H D
Kshetra Samachara

Kshetra Samachara

26/03/2022 10:43 am

Cinque Terre

19.28 K

Cinque Terre

8

ಸಂಬಂಧಿತ ಸುದ್ದಿ