ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಾಲಿನ ದರ ಏರಿಸದಿದ್ದಲ್ಲಿ ಪ್ರತಿಭಟನೆ

ಉಡುಪಿ: ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿನ ಮೇಲಿನ ಪ್ರೋತ್ಸಾಹ ಧನವನ್ನು ಕನಿಷ್ಠ 10 ರೂಪಾಯಿಗೆ ಜಾಸ್ತಿ ಮಾಡಬೇಕು ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಭಾರತಿ ಹಾಲು ಪಕೋಷ್ದದ ಸಂಚಾಲಕ ಸಾಣೂರು ನರಸಿಂಹ ಕಾಮತ್, ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಇನ್ನಿತರ ಕಾರಣಗಳಿಂದಾಗಿ ಪ್ರತಿ ಲೀಟರ್ ಹಾಲಿನ ಮೇಲಿನ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದಾಗಿ ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದಿದೆ. ರಾಜ್ಯದ ಕೆಎಂಎಪ್ ವ್ಯಾಪ್ತಿಯಲ್ಲಿ ಸರಿಸುಮಾರು 4ರಿಂದ 5 ಲಕ್ಷದಷ್ಟು ದಿನವಹಿ ಹಾಲು ಸಂಗ್ರಹದಲ್ಲಿ ಇಳಿಕೆಯಾಗುತ್ತಿದೆ. ರೈತರ ಕಷ್ಟವನ್ನು ಮನಗಂಡು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕುಟ ಅಕ್ಟೋಬರ್ ತಿಂಗಳಿನಿಂದ ಹಾಲಿನ ಖರೀದಿ ದರಕ್ಕೆ ಹೆಚ್ಚುವರಿಯಾಗಿ 2.05 ರುಪಾಯಿ ಪ್ರೊತ್ಸಾಹ ಧನ ನೀಡುತ್ತಿದೆ. ಹಾಲು ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವುದರಿಂದ ಸರಕಾರವು ಹೈನುಗಾರರಿಗೆ ನಿಡುವ ಪ್ರೊತ್ಸಾಹ ಧನವನ್ನು ಕನಿಷ್ಟ 10 ರುಪಾಯಿ ಜಾಸ್ತಿ ಮಾಡಬೇಕು.ತಪ್ಪಿದಲ್ಲಿ ಹೈನುಗಾರರನ್ನು ಸಂಘಟಿಸಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲಾವುದು ಎಂದು ಎಚ್ಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/10/2022 05:40 pm

Cinque Terre

10.35 K

Cinque Terre

10