ಮುಲ್ಕಿ: ಮುಲ್ಕಿ ನ.ಪಂ. ಆಡಳಿತಾಧಿಕಾರಿಯಾಗಿ ಉತ್ತಮ ಆಡಳಿತ ನೀಡಿದ ಮಾಣಿಕ್ಯ ಎನ್. ಅವರ ಸಾಧನೆ ಅನುಕರಣೀಯ ಎಂದು ಮುಲ್ಕಿ ನ.ಪಂ. ಮುಖ್ಯಾಧಿಕಾರಿ ಚಂದ್ರಪೂಜಾರಿ ಹೇಳಿದರು.
ಅವರು ಮುಲ್ಕಿ ನ.ಪಂ. ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ ರಾ.ಹೆ. ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಯಾಗಿ ಭಡ್ತಿ ಹೊಂದಿರುವ ಮಾಣಿಕ್ಯ ಎನ್ . ಅವರಿಗೆ ಮುಲ್ಕಿ ನ.ಪಂ. ವತಿಯಿಂದ ಗೌರವಿಸಿ ಮಾತನಾಡಿದರು.
ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಪುತ್ತುಬಾವ, ವಿಮಲ ಪೂಜಾರಿ, ಶೈಲೇಶ್ ಕುಮಾರ್, ಬಾಲಚಂದ್ರ ಕಾಮತ್, ಹರ್ಷರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/12/2020 07:53 am