ಮಂಗಳೂರು: ದ.ಕ. ಜಿಲ್ಲೆಯಲ್ಲಿ
‘ಸ್ಯಾಂಡ್ ಬಝಾರ್ ಆ್ಯಪ್’ ಮೂಲಕ ಸಾರ್ವಜನಿಕರಿಗೆ ಹಾಗೂ ಸರಕಾರಿ ಮತ್ತು ಇತರ ಕಾಮಗಾರಿಗಳಿಗೆ ಮರಳು ಪೂರೈಸಲು ನ.27ರಿಂದ ಚಾಲನೆ ನೀಡಲಾಗಿದೆ.
ಸಾರ್ವಜನಿಕರು, ಗ್ರಾಹಕರು
ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ‘ಸ್ಯಾಂಡ್ ಬಝಾರ್ ಆ್ಯಪ್’ನಲ್ಲಿ ಬುಕ್ ಮಾಡಿ ಮರಳು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, 1ನೇ ಮಹಡಿ, ಜುಗುಲ್ ಬಿಲ್ಡಿಂಗ್, ಮಲ್ಲಿಕಟ್ಟೆ, ಮಂಗಳೂರು-575002’ ಅಥವಾ 6366876888 ನ್ನು ಸಂಪರ್ಕಿಸಲು ಮರಳು ಸಮಿತಿಯ ಉಪನಿರ್ದೇಶಕರು ಹಾಗೂ ಅನುಷ್ಠಾನಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
01/12/2020 10:44 am