ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿಯಲ್ಲಿ ಅಂತರ್ಜಲ ಪುನಶ್ಚೇತನ ಬಗ್ಗೆ ಮಾಹಿತಿ ಸಭೆ

ಮುಲ್ಕಿ:ದ.ಕ ಜಿಲ್ಲಾ ಪಂಚಾಯತ್ , ಜಿಲ್ಲಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ಸಮುದಾಯ ಸಂಸ್ಥೆ (ರಿ) ತುಮಕೂರು ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಹಮ್ಮಿಕೊಳ್ಳುವ ಐಇಸಿ ಮತ್ತು ಹೆಚ್.ಆರ್.ಡಿ ಬಗ್ಗೆ ಹಳೆಯಂಗಡಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಗ್ರಾಮಸಭೆ ಮತ್ತು ಅಂತರ್ಜಲ ಪುನಶ್ಚೇತನದ ಕುರಿತು ಮಾಹಿತಿ ಸಭೆ ನಡೆಯಿತು. ಜೆಜೆಎಮ್ ಐಇಸಿ ಮಹಾಂತೇಶ್ ಹಿರೇಮಠ್ ಜಲಜೀವನ್ ಮಿಷನ್ ಕಾರ್ಯಾನುಷ್ಠಾನದ ಕುರಿತು ಮಾಹಿತಿ ನೀಡಿದರು.ಮಂಗಳೂರು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ್ಷೇತ್ರದ ಕಿರಿಯ ಅಭಿಯಂತರರು ಮತ್ತು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿವರ ಮಾರ್ಗದರ್ಶನದಂತೆ ಸಭೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾಲೂಕ ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ , ನರೇಗಾ ನೋಡಲ್ ಅಧಿಕಾರಿ, ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗುಮಾಸ್ತೆ, ಪಂಚಾಯತ್ ಸಿಬ್ಬಂದಿಗಳು,ನಿಕಟಪೂರ್ವ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

28/11/2020 12:40 pm

Cinque Terre

5.23 K

Cinque Terre

0

ಸಂಬಂಧಿತ ಸುದ್ದಿ