ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ವಿರೋಧಿಸಿ ಕಡಬದಲ್ಲಿ ಬೃಹತ್ ಪ್ರತಿಭಟನೆ

ಕಡಬ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿರುದ್ಧ ಕಡಬ ತಾಲೂಕಿನ ಭಾದಿತ ಗ್ರಾಮಗಳ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನಾ ಸಭೆ ಕಡಬ ತಹಸೀಲ್ದಾರ್ ಕಛೇರಿ ಸಮೀಪ ನ.24 ರಂದು ನಡೆಯಿತು.

ಕಡಬ ಮೇಲಿನ ಪೇಟೆಯಿಂದ ಕಾಲ್ನಡಿಗೆ ಜಾಥಾದ ಮೂಲಕ ಪೇಟೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಜಿ.ಪ. ಮಾಜಿ ಸದಸ್ಯ ಮೀರಾ ಸಾಹೇಬ್, ಕರ್ನಾಟಕ ರಕ್ಷಣಾ ವೇದಿಕೆಯ ಮಹಮ್ಮದ್ ಕುಕ್ಕುವಳ್ಳಿ, ಧರ್ಮಗುರು ಆದರ್ಶ್ ಜೋಸೆಫ್, ಕೌಕ್ರಾಡಿ ತಾ.ಪಂ.ಸದಸ್ಯೆ ವಲ್ಸಮ್ಮ ಕೆ.ಟಿ., ಮಲಯಾಳಿ ಕ್ರಿಶ್ಚಿಯನ್ ಕಡಬ ತಾಲೂಕು ಅಧ್ಯಕ್ಷರಾದ ಕ್ಸೇವಿಯರ್ ಬೇಬಿ, ರೈತ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಪ್ರಮುಖರಾದ ಧನಂಜಯ ಕೊಡಂಗೆ, ಹಾಜಿ ಹನೀಫ್ ಕೆ.ಎಂ., ದೇವಯ್ಯ ಪನ್ಯಾಡಿ, ಶಾರದಾ ದಿನೇಶ್, ರವೀಂದ್ರ ರುದ್ರಪಾದ, ಶಶಿಧರ್ ಬೊಟ್ಟಡ್ಕ, ವಸಂತ ಕುಬಲಾಡಿ, ರಾಯ್ ಅಬ್ರಹಾಂ, ಮೊಯ್ದುನ್ ಮದರ್ ಇಂಡಿಯಾ, ಕುಮಾರಿ ವಾಸುದೇವನ್, ಆಶಾ ಲಕ್ಷ್ಮಣ್ ರವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/11/2020 06:19 pm

Cinque Terre

9.32 K

Cinque Terre

0