ಉಡುಪಿ: ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಮಲ್ಪೆ – ಮೊಳಕಾಲ್ಮೂರು ರಾ.ಹೆ. 169ಎ ಅಗಲೀಕರಣ ಕಾಮಗಾರಿ ಪರ್ಕಳ ಭಾಗದಲ್ಲಿ ಸ್ಥಗಿತಗೊಂಡಿದೆ. ನಿತ್ಯ ಸಂಚಾರಕ್ಕೆ, ಪ್ರಯಾಣಿಕರಿಗೆ, ಸ್ಥಳೀಯರಿಗೆ ತುಂಬಾ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ವಿಳಂಬ ಧೋರಣೆ ವಿರೋಧಿಸಿ ಇಂದು ಪರ್ಕಳದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಪರ್ಕಳ ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಮಣಿಪಾಲ, ಪರ್ಕಳ ನಾಗರಿಕರು ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವಿಳಂಬ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಮತ್ತಿತರರು ಭಾಗವಹಿಸಿದರು.
Kshetra Samachara
12/11/2020 05:26 pm