ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣ ಪಕ್ಕದ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಹರಡಿರುವ ಕಸ ತ್ಯಾಜ್ಯಗಳ ಸ್ವಚ್ಛತೆಗೊಳಿಸುವ ಕಾರ್ಯವು ಆಗಿಂದಾಗ ನಡೆಯುತ್ತಲೇ ಇರುತ್ತವೆ. ಇಲ್ಲಿ ಗುಡಿಸಿ ಸಂಗ್ರಹಿಸಿರುವ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸಂಗ್ರಹ ಮಾಡಿಡಲಾಗುತ್ತದೆ ಮಾತ್ರವಲ್ಲ ,ಸಂಗ್ರಹಿಸಿ ಇಟ್ಟಿರುವ ಕಸ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೊಳಿಸದೆ, ತ್ಯಾಜ್ಯ ಸಂಗ್ರಹಣ ತೊಟ್ಟಿಯಲ್ಲಿ ಬೆಂಕಿ ಇಟ್ಟು ನಾಶಗೊಳಿಸುವ ಪ್ರಕ್ರಿಯೆಯು ಇಲ್ಲಿ ಅನಾರೋಗ್ಯಕರ ರೀತಿಯಲ್ಲಿ ನಡೆಯುತ್ತಿದೆ.
ಬೆಂಕಿ ಜ್ವಾಲೆಗೆ ತಾಜ್ಯ ತೊಟ್ಟಿಯಿಂದ ಎದ್ದೇಳುವ ಹೊಗೆಯು ಪರಿಸರದಲ್ಲಿ ಹರಡುತ್ತಿದ್ದು, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಹೊರಡುವ ವಿಷಕಾರಿ ರಾಸಾಯನಿಕ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುವ ಸಾಧ್ಯತೆ ಇರುತ್ತದೆ. ಕ್ಯಾನ್ಸರ್, ಉಬ್ಭಸ, ಮೊದಲಾದ ವ್ಯಾಧಿಗಳು ಬರಲು ಕಾರಣವಾಗುತ್ತದೆ. ಈ ಪರಿಸರದಲ್ಲಿ ಸಾರ್ವಜನಿಕರ ಮತ್ತು ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರ ಸಂಚಾರ ಹೆಚ್ಚಿರುವುದರಿಂದ ಬಹಳವಾಗಿ ಇರುತ್ತದೆ. ಇವರೆಲ್ಲರೂ ಅಶುದ್ಧ ಗಾಳಿಯಿಂದ ಉಸಿರಾಟ ನಡೆಸಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ನಗರಾಡಳಿತದ ನಿಯಮಾವಳಿ ಪ್ರಕಾರ ಜೈವಿಕ- ಅಜೈವಿಕ ಕಸ ತ್ಯಾಜ್ಯಗಳ ವಿಂಗಡಿಸಿ ವಿಲೇವಾರಿ ಮಾಡಬೇಕು ಎಂದು ಉಡುಪಿಯ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
Kshetra Samachara
12/11/2020 02:14 pm