ಮಂಗಳೂರು: ನಗರದ ಮರವೂರು ಸಮೀಪದ ಫಲ್ಗುಣಿ ನದಿಯಲ್ಲಿ ನೀರು ಕಲುಷಿತಗೊಂಡ ಪರಿಣಾಮ ಸಾವಿರಾರು ಮೀನುಗಳು ಮಾರಣಹೋಮ ನಡೆದಿದೆ. ನದಿಯ ಸುತ್ತಮುತ್ತಲಿನ ಕೈಗಾರಿಕಾ ತ್ಯಾಜ್ಯ ನದಿ ಸೇರುತ್ತಿರುವ ಪರಿಣಾಮ ನದಿಯ ನೀರು ಸಂಪೂರ್ಣ ಕಪ್ಪುಬಣ್ಣಕ್ಕೆ ತಿರುಗಿದೆ. ಪರಿಣಾಮ ನದಿ ನೀರು ಕಲುಷಿತಗೊಂಡಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕೈಗಾರಿಕಾ ತ್ಯಾಜ್ಯ ನದಿ ನೀರನ್ನು ಸೇರುತ್ತಿರುವ ಬಗ್ಗೆ ಸತತ ದೂರುಗಳು ನೀಡಿದರೂ, ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತದ ಕರ್ತವ್ಯಲೋಪದ ಬೇಜವಾಬ್ದಾರಿತನದಿಂದ ನೆಲ, ಜಲವನ್ನು ವಿಷಮಯವಾಗುತ್ತಿದೆ.
ಬೈಕಂಪಾಡಿ ಕೈಗಾರಿಕಾ ವಲಯದಿಂದ ಫಲ್ಗುಣಿ ನದಿ ಸೇರುವ ತೋಕೂರು ಹಳ್ಳದಲ್ಲಿ, ನೀರು ಪೂರ್ತಿ ಕಪ್ಪು ಬಣ್ಣಕ್ಕೆ ತಿರುಗಿದ್ದು, ದುರ್ನಾತ ಬೀರುತ್ತಿದೆ. ಕಳೆದ ಒಂದು ತಿಂಗಳಿನಿಂದಲೂ ಈ ಸ್ಥಿತಿ ಇದ್ದರೂ, ಜಿಲ್ಲಾಡಳಿತ ಮೌನವಹಿಸಿದೆ. ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಇತ್ತಕಡೆಗೆ ಗಮನ ಹರಿಸಬೇಕಾಗಿದೆ ಎಂದು ಸ್ಥಳೀಯರು ಅವಲತ್ತುಕೊಳ್ಳುತ್ತಿದ್ದಾರೆ.
Kshetra Samachara
25/04/2022 09:20 pm