ಹಿರಿಯಡ್ಕ: ಹಾವಿನ ವಿಷಯದಲ್ಲಿ ಭಯಗೊಂಡು ಮಾನಸಿಕ ಕಾಯಿಲೆಗೆ ಒಳಗಾದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಪೆರ್ಡೂರು ಹೋಳಿಂಜೆ ನಿವಾಸಿ ಇಂದಿರಾ ಶೆಟ್ಟಿ (61) ಆತ್ಮಹತ್ಯೆ ಮಾಡಿಕೊಂಡವರು. ಹಾವಿನ ಬಗ್ಗೆ ವಿಪರೀತ ಭಯ ಹೊಂದಿದ್ದ ಇವರು, 3 ತಿಂಗಳ ಹಿಂದೆ ನಾಗರ ಪಂಚಮಿ ದಿನದಂದು ತನ್ನ ಕಾಲಿನ ಮೇಲೆ ಹಾವೊಂದು ಹರಿದು ಹೋಗಿದೆ ಎಂದು ಮಾನಸಿಕ ಕಾಯಿಲೆಗೆ ತುತ್ತಾಗಿದ್ದರು. ಇದೇ ವಿಷಯದಲ್ಲಿ ಮಾನಸಿಕವಾಗಿ ನೊಂದ ಅವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾವಿಯ ಸಿಮೆಂಟ್ ಕಂಬಕ್ಕೆ ನೇಣು ಬಿಗಿದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/10/2022 12:31 pm