ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿಯ ಕರ್ಜೆಯ ಸುಗ್ಗಿ ಸುಧಾಕರ ಶೆಟ್ಟಿಯವರ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಇಂಟರ್ ನ್ಯಾಷನಲ್ ಕೌನ್ಸಿಲ್ ಏಷ್ಯಾ ವೇದಿಕೆ ಕಲ್ಚರಲ್ ಪೌಂಡೇಶನ್ ವತಿಯಿಂದ ಶನಿವಾರ ತಮಿಳುನಾಡಿನ ಹೊಸೂರು ನಗರದಲ್ಲಿ ನೆಡೆದ ಏಷ್ಯಾ ವೇದಿಕೆ ಕಲ್ಚರಲ್ ರಿಚರ್ಸ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಾಧಾನ ಮಾಡಿ ಗೌರವಿಸಲಾಯಿತು.
ಏಷ್ಯಾ ವೇದಿಕೆ ಅಕಾಡೆಮಿಯ ಸಂಸ್ಥಾಪಕರು ಹಾಗೂ ತಮಿಳುನಾಡಿನ ಮಾಜಿ ಶಾಸಕ ಡಾ.ಕೆ.ಎ ಮನೋಹರನ್, ಹೈಕೋರ್ಟ್ ನ್ಯಾಯವಾದಿ ಸಿ.ಮಾರ್ಗರೇಟ್ ಅಮೂಲ್ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಅನೇಕ ವರ್ಷದಿಂದ ಹುಬ್ಬಳ್ಳಿ- ಧಾರವಾಡದಲ್ಲಿ ಉದ್ಯಮಿಯಾಗಿದ್ದು, ಅಲ್ಲಿನ ಬಂಟರ ಸಂಘದ ಅಧ್ಯಕ್ಷರಾಗಿದ್ದು, ಸಮಾಜಸೇವಾ ಕಾರ್ಯದಲ್ಲಿ ಗುರುತಿಸಿಕೊಂಡ ಸುಧಾಕರ ಶೆಟ್ಟಿಯವರು ಹೂಟ್ಟೂರಿನಲ್ಲಿ ಕೋವಿಡ್ ಸಂದರ್ಭ ಅನೇಕರಿಗೆ ಆಹಾರ ಸಾಮಗ್ರಿ ನೀಡಿದ್ದರು.
Kshetra Samachara
01/10/2022 05:31 pm