ವರದಿ: ರಹೀಂ ಉಜಿರೆ
ಹೆಬ್ರಿ: ಸಾನ್ವಿ ನಾಯ್ಕ್ ಎಂಬ ಹತ್ತರ ಬಾಲಕಿ ಎಲ್ಲ ಮಕ್ಕಳಂತೆ ನಲಿದಾಡುತ್ತಿದ್ದಳು. ಆದರೆ, ಈಗ ಈ ಬಾಲಕಿ ಮೇಲೆ ವಿಧಿಯ ಕ್ರೂರ ದೃಷ್ಟಿ ಬಿದ್ದಿದೆ. ಮಗಳ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದ ಹೆತ್ತವರು ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ.
ಇಷ್ಟು ಸಣ್ಣ ವಯಸ್ಸಲ್ಲಿ ಈ ಮಗುವಿಗೆ " ತಲೇಸೆಮಿಯಾ ಮೇಜರ್ "ಎನ್ನುವ ವಿಚಿತ್ರ ಖಾಯಿಲೆ ಕಾಣಿಸಿಕೊಂಡಿದೆ! ಹೆತ್ತವರು ಈಗಾಗಲೇ ವಿವಿಧ ಅಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಲೆದಾಟ ನಡೆಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಪುಟಾಣಿಗೆ ಬೋನ್ ಮ್ಯಾರೊವ್ ಟ್ರಾನ್ಸ್ ಪ್ಲಾಂಟ್ ಎನ್ನುವ ಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಕೇಳಿ ಹೆತ್ತವರಿಗೆ ಸಿಡಿಲು ಬಡಿದಂತಾಗಿದೆ.
ಇದಕ್ಕೆ ತಗಲುವ ವೆಚ್ಚ ಸುಮಾರು ನಲ್ವತ್ತು ಲಕ್ಷ! ಹೆಬ್ರಿಯ ಕುಚ್ಚೂರು ಗ್ರಾಮದಲ್ಲಿ ನೆಲೆಸಿರುವ ಚಂದ್ರ ನಾಯ್ಕ್ ಹಾಗೂ ಮಾಲತಿ ದಂಪತಿ ಮಗು ಸಾನ್ವಿ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ ಇವರದ್ದು. ತಂದೆ ಚಂದ್ರ ನಾಯ್ಕ್ ಪುಟ್ಟ ಅಂಗಡಿಯನ್ನಿಟ್ಟು ಜೀವನ ಸಾಗಿಸುತ್ತಿದ್ದಾರೆ. ಒಬ್ಬಳೇ ಮಗಳಾಗಿದ್ದರಿಂದ ಮುದ್ದಾಗಿ ಸಾಕಿದ್ದರು. ಮಗಳ ಮೇಲೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಅದರೆ, ಸಂತೋಷದಿಂದಿದ್ದ ಕುಟುಂಬ ಈಗ ಕಂಗೆಟ್ಟು ಹೋಗಿದೆ.
ತನಗೆ ಬರುವ ಅಲ್ಪ ಸ್ವಲ್ಪ ಅದಾಯ ಸದ್ಯ ಅಸ್ಪತ್ರೆ ಖರ್ಚಿಗೂ ಸಾಕಾಗುತ್ತಿಲ್ಲ. ಪ್ರತಿ ತಿಂಗಳು ಸಾವಿರಾರು ರೂ. ಸಾಲ ಮಾಡಿ ಮಗುವಿನ ಚಿಕಿತ್ಸೆ ಮಾಡಲಾಗುತ್ತಿದೆ. ಮಗು ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ ನಲ್ವತ್ತು ಲಕ್ಷ ಹಣ ಹೊಂದಿಸುವುದು ಕನಸಿನಲ್ಲೂ ಸಾಧ್ಯವಾಗದ ಮಾತು. ಪುಟ್ಟ ಬಾಲಕಿಯ ಚಿಕಿತ್ಸೆಗಾಗಿ ಸಹೃದಯಿಗಳು ಸಹಾಯ ಮಾಡುವಂತೆ ಹೆತ್ತವರು ಮನವಿ ಮಾಡಿದ್ದಾರೆ.
ಬಾಲಕಿಯ ಚಿಕಿತ್ಸೆಗೆ ಸಹೃದಯರು ಕೈಲಾದಷ್ಟು ಸಹಾಯ ಮಾಡಬೇಕಾಗಿದೆ. ಈಗಾಗಲೇ ಕೆಲವರು ಸಹಾಯ ಮಾಡಿದ್ದಾರೆ. ಮತ್ತೆ ಆ ಪುಟಾಣಿ ಹಾಸಿಗೆಯಿಂದ ಎದ್ದು ನಲಿದಾಡುವಂತೆ ಮಾಡಲು ದಾನಿಗಳ ನೆರವು ಬೇಕಾಗಿದೆ.
ಬಾಲಕಿಗೆ ಸಹಾಯ ಮಾಡುವವರು:
Name : Sanvi Naik
Acount number: 41145139680
IFSC CODE: SBINOO13350*
Bank: SBI ,hebri
Acount type: Saving acount
Google pay number: 9945601769
PublicNext
01/09/2022 12:37 pm