ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಊರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಮಾಮೂಲಾಗಿದೆ. ಇದರಿಂದಾಗಿ ನಗರವಾಸಿಗಳಿಗೆ ದೊಡ್ಡ ತಲೆನೋವಾಗಿದೆ. ಇದೀಗ ಮಣಿಪಾಲದ ಪಕ್ಕದಲ್ಲಿರುವ ಪರ್ಕಳದಲ್ಲಿ ಚಿರತೆ ಕಾಣಿಸಿಕೊಂಡಿದೆ.! ಪರ್ಕಳ ಸಮೀಪದ ಹೆರ್ಗ ಗ್ರಾಮದ ಗೋಳಿಕಟ್ಟೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಈ ಚಿರತೆ ಸ್ಥಳೀಯ ನಿವಾಸಿ ಬಾಲಚಂದ್ರ ಕೆದ್ಲಾಯ ಅವರ ಮನೆಯ ಅಂಗಳದಲ್ಲಿ ಕುತ್ತಿಗೆಗೆ ಬೆಲ್ಟ್ ಹಾಕಿ ಕಟ್ಟಿದ್ದ ಸಾಕು ನಾಯಿಯನ್ನು ಎಳೆದೊಯ್ದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ.
ಈ ಹಿಂದೆಯೂ ಈ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು.ಊರಿನ ನಾಟಿಕೋಳಿ, ಸಾಕುನಾಯಿಗಳನ್ನು ಚಿರತೆಗಳು ಹೊತ್ತೊಯ್ಯುತ್ತಿದ್ದವು. ಇದೀಗ ಮತ್ತೆ ಈ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯ ನಾಗರಿಕರು ಆತಂಕಗೊಳ್ಳುವಂತೆ ಮಾಡಿದೆ.
Kshetra Samachara
12/08/2022 05:00 pm