ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ
Video Player is loading.
Current Time 0:00
/
Duration 0:00
Loaded: 0%
0:00
Progress: 0%
Stream Type LIVE
Remaining Time -0:00
 
1x

ಕಾರ್ಕಳ: ಕೈಗಳಿಲ್ಲದ ಈ ಮಹಿಳೆಯ ಬದುಕೇ ಒಂದು ಸ್ಪೂರ್ತಿ: ಅಂಗವಿಕಲತೆ ಶಾಪವಲ್ಲ ಎಂಬುದಕ್ಕೆ ಇವರೇ ಸಾಕ್ಷಿ

ಕಾರ್ಕಳ: ಅಂಗವಿಕಲತೆ ಇದ್ದರೆ ಇಡೀ ಬದುಕೇ ಮುಗಿಯಿತು ಎಂದು ಕಣ್ಣೀರಿಡುವ ಜನರ ನಡುವೆ ತನ್ನದೇ ಸಮುದಾಯದ ನೆರವನ್ನು ಪಡೆದುಕೊಂಡು ಸಾಧನೆ ಮಾಡಿದವರು ಉಡುಪಿಯಲ್ಲಿದ್ದಾರೆ. ಬಾಲ್ಯದಲ್ಲೇ ತನ್ನೆರಡೂ ಕೈಗಳನ್ನು ಕಳೆದುಕೊಂಡ ಈಕೆಯ ಬದುಕು ಇತರರಿಗೆ ಸ್ಫೂರ್ತಿ. ಹಾಗಿದ್ರೆ ಯಾರೀಕೆ?

ಇವರ ಹೆಸರು ಮಾಲಿನಿ ಭಂಡಾರಿ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರಿ ನಿವಾಸಿ ಧರ್ಮಪಾಲ ಭಂಡಾರಿ ಮತ್ತು ಪುಷ್ಪಾವತಿ ದಂಪತಿ ಪುತ್ರಿ .ಈ ದಂಪತಿಗೆ ಅವಳಿ ಮಕ್ಕಳು. ಅವರಲ್ಲಿ ಒಬ್ಬಾಕೆ ಈ ಮಾಲಿನಿ. ಬಾಲ್ಯದಲ್ಲಿ ಸಹೋದರಿ ಜೊತೆ ಆಟವಾಡುತ್ತಾ , ಭತ್ತ ಬೇಯಿಸುವ ಒಲೆಗೆ ಕೈ ಹಾಕಿ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲೂ ಛಲ ಬಿಡದ ಮಾಲಿನಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನಂತರ ಸರಕಾರಿ ಹುದ್ದೆಗಳಿಗೆ ಅರ್ಜಿ ಬರೆಯುತ್ತಲೇ ಇದ್ದರೂ ಕೂಡ ಯಾವುದೇ ಸರಕಾರಿ ಹುದ್ದೆ ಒದಗಿ ಬರಲಿಲ್ಲ .ಕೊನೆಗೆ ಇವರ ಕೈ ಹಿಡಿದಿದ್ದು ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ....

ಉಡುಪಿಯ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಮಾಲಿನಿಯವರಿಗೆ ಉದ್ಯೋಗ ಸಿಕ್ಕಿತು. ನಂತರ 2007 ರಿಂದ 2012ವರೆಗೆ ಉಡುಪಿಯ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಅಲ್ಲಿಂದ ಕಾರ್ಕಳ ಶಾಖೆಗೆ ಶಾಖಾ ವ್ಯವಸ್ಥಾಪಕಿಯಾಗಿ ವರ್ಗಾವಣೆಗೊಂಡರು. ಅರ್ಧ ತೋಳಿನ ನಡುವೆ ಪೆನ್ ಹಿಡಿದು ಬರೆಯುತ್ತಾರೆ, ಕಂಪ್ಯೂಟರ್ , ಮೊಬೈಲ್ ನಲ್ಲಿ ಕೆಲಸ ಮಾಡ್ತಾರೆ. ಮಾತ್ರವಲ್ಲ ,ನಿತ್ಯ ಪ್ರಯಾಣ ಮಾಡಿಕೊಂಡು ಕಚೇರಿಗೆ ಬರುತ್ತಾರೆ. ಮನೆ ಹಾಗೂ ಕಚೇರಿ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ.

ಅಂಗವಿಕಲತೆ ಅನ್ನುವುದು ಶಾಪವಲ್ಲ. ಸಾಧಿಸುವ ಛಲವಿದ್ದರೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬುವುದಕ್ಕೆ ನಮ್ಮೆದುರಿಗೆ ಮಾದರಿಯಾಗಿ ನಿಲ್ಲುತ್ತಾರೆ ಮಾಲಿನಿ ಭಂಡಾರಿ.

ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By :
PublicNext

PublicNext

11/08/2022 09:22 pm

Cinque Terre

59.85 K

Cinque Terre

4

ಸಂಬಂಧಿತ ಸುದ್ದಿ