ಕೊಲ್ಲೂರು : ಕೊಲ್ಲೂರು ಗ್ರಾಮದ ಮೇಲ್ದಳಿ ನಿವಾಸಿ ನಾರಾಯಣ (54) ಎಂಬವರು ಜು.9ರಂದು ಮನೆಯಿಂದ ಹೋದವರು ಈ ತನಕ ಮನೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 2 ಇಂಚು ಎತ್ತರ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ತಲೆ ಕೂದಲು, ಮುಖದಲ್ಲಿ ಕಪ್ಪು ಕಲೆ ಇರುತ್ತದೆ. ಕೆಂಪು ಬಣ್ಣದ ತೋಳಿನ ಅಂಗಿ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ಮಲೆಯಾಳಿ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/07/2022 04:52 pm