ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕುಸಿಯುವ ಹಂತದಲ್ಲಿ ಸೂರು; ನೆರವಿನ ನಿರೀಕ್ಷೆಯಲ್ಲಿ ಬಡಕುಟುಂಬ

ವರದಿ: ಭರತ್ ಶೆಟ್ಟಿ

ಹಾಲಾಡಿ: ಅಮಾಸೇಬೈಲು ಸಮೀಪದ ಮಾವಿನಕೂಡ್ಲು ಗ್ರಾಮದ ನಿವಾಸಿ ಮಲ್ಲು ನಾಯ್ಕ ಅವರ ಮನೆ ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿದ್ದು, ಮರದಿಂದ ಮಾಡಿದ ಕಿಟಕಿಗಳು ಈಗಾಗಲೇ ಮುರಿದು ಬಿದ್ದಿದೆ.

ಮಲ್ಲು ನಾಯ್ಕ ಅವರಿಗೆ 20 ವರ್ಷಗಳ ಹಿಂದೆ ಕಾಲು ಹಾಗೂ ಕೈಗೆ ದೊಡ್ಡ ಏಟು ಬಿದ್ದು ನಡೆದಾಡಲು ಕೂಡ ಕಷ್ಟ ಪಡುವಂತಾಗಿದೆ. ಅಲ್ಲದೆ, ಈಗಾಗಲೇ ಒಂದು ಹೆಣ್ಣು ಮಗಳನ್ನು ಕಳೆದುಕೊಂಡು ದುಃಖತಪ್ತವಾಗಿರುವ ಕುಟುಂಬ ಇದೀಗ ಮನೆಯನ್ನೂ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದೆ.

ಆಶ್ರಯಕ್ಕಾಗಿ ಇರುವ ಏಕೈಕ ಮನೆಯೂ ಇಂದಲ್ಲ, ನಾಳೆ ಧರಾಶಯಿಯಾಗುವ ಹಂತದಲ್ಲಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಆಸೆ-ಆಕಾಂಕ್ಷೆಯಲ್ಲಿರುವ ಈ ಕುಟುಂಬಕ್ಕೆ ಊರಿನ ಜನಪ್ರತಿನಿಧಿಗಳು, ಸಹೃದಯ ದಾನಿಗಳು ಸ್ಪಂದಿಸಿ ನೂತನ ಮನೆ ಕಟ್ಟಿಸಿಕೊಟ್ಟು, ಬಡಕುಟುಂಬಕ್ಕೆ ಬೆಳಕು ನೀಡಬೇಕಾಗಿದೆ.

ಸಹಾಯ ಮಾಡಲು ಇಚ್ಚಿಸುವವರು ಈ ಕೆಳಗಿನ ಖಾತಗೆ ಹಣ ಹಾಕಬಹುದು

A/ C Holder Name : Baby Nayakthi

Account no : 81790100001613

Branch : Halady

IFSC CODE : BARB0VJHALA

Edited By : Manjunath H D
Kshetra Samachara

Kshetra Samachara

05/04/2022 04:42 pm

Cinque Terre

36.07 K

Cinque Terre

0

ಸಂಬಂಧಿತ ಸುದ್ದಿ