ಕಾರ್ಕಳ: ಕಾರ್ಕಳದ ಮಿಯಾರು ಕಜೆ ಎಂಬಲ್ಲಿಯ ಯಶೋಧ ಆಚಾರ್ಯ ಕುಟುಂಬಕ್ಕೆ ಸೇರಿದ 16 ಗೋವುಗಳನ್ನು ಒಂದೂವರೆ ವರ್ಷದ ಅವಧಿಯಲ್ಲಿ ಗೋ ಕಳ್ಳರು ಕದ್ದೊಯ್ದಿಧ್ದಾರೆ. ತೀವ್ರ ಸಂಕಷ್ಟದಲ್ಲಿರುವ ಮಹಿಳೆಯ ಕುಟುಂಬಕ್ಕೆ ಸ್ಪಂದಿಸಿ ಹಲವರು ಗೋವು,ಮೇವುಗಳನ್ನು ನೀಡಿ ಸ್ಪಂದಿಸುತ್ತಿದ್ಸಾರೆ.
ಇಂದು ಕಾಪು ತಾಲೂಕು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಆಚಾರ್ಯ ಓಂ ಸಾಯಿ ಪಾಂಗಾಳ ಅವರು ಸುಮಾರು 25 ಸಾವಿರ ಬೆಲೆಯುಳ್ಳ ಹಸುವೊಂದನ್ನು ದಾನವಾಗಿ ನೀಡಿದರು. ಜತೆಗೆ ಮೇವು, ಹಿಂಡಿಗಳನ್ನು ನೀಡಿ ಸಹಕರಿಸಿದರು.
ಗೋವುಗಳನ್ನೇ ಆಧಾರವಾಗಿರಿಸಿ ಕೊಂಡು ಬದುಕು ಕಟ್ಟಿಕೊಂಡ ಬಡ ಮಹಿಳೆಯ ಕುಟುಂಬ ಗೋವುಗಳನ್ನು ಕಳೆದುಕೊಂಡು ತೀರಾ ಸಂಕಷ್ಟದಲ್ಲಿದೆ. ಇಂತಹ ಕುಟುಂಬಕ್ಕೆ ನೆರವು ನೀಡುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದು ರಾಜೇಶ್ ಆಚಾರ್ಯ ಹಾರೈಸಿದರು.
ಈ ಸಂದರ್ಭ ಪ್ರವೀಣ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಅಮೀನ್, ಅಜಿತ್ ಮೆಂಡನ್, ಪ್ರಸಾದ್ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು.
Kshetra Samachara
13/01/2022 12:51 pm