ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಅಸಹಾಯಕ ದೃಷ್ಟಿಹೀನ ವೃದ್ಧ ದಂಪತಿಗೆ ಬೇಕಿದೆ ನೆರವಿನ ಹಸ್ತ

ಬ್ರಹ್ಮಾವರ: ಬದುಕು ಕೆಲವರಿಗೆ ವರವಾದರೆ ಇನ್ನೂ ಕೆಲವರಿಗೆ ಶಾಪದಂತೆ ಇರುತ್ತದೆ. ಬ್ರಹ್ಮಾವರದ ಬೈಕಾಡಿಯ ಗಾಂಧಿನಗರದಲ್ಲಿ ವಾಸಿಸುತ್ತಿರುವ ಈ ವೃದ್ಧ ದೃಷ್ಟಿಹೀನ‌ ದಂಪಪತಿಯ ಕಷ್ಟ ಯಾರಿಗೂ ಬೇಡ! ಸಂಪೂರ್ಣ ದೃಷ್ಟಿಹೀನ ಪತಿ ಹಾಗೂ ಅಲ್ಪ ದೃಷ್ಟಿ ಇರುವ ಪತ್ನಿ ಅಸಹಾಯಕ ಸ್ಥಿತಿಯಲ್ಲಿ ಜೋಪಡಿಯಲ್ಲಿ ದಿನ ಕಳೆಯುತ್ತಿದ್ದಾರೆ.

ತಮ್ಮ ಶೋಚನೀಯ ಪರಿಸ್ಥಿತಿಯಲ್ಲಿ ಸಮಾಜ ಹಾಗೂ ಸರಕಾರ ಏನಾದರೂ ನೆರವು ನೀಡಬಹುದು ಎಂಬ ನಿರೀಕ್ಷೆಯಲ್ಲೇ ಈ ದಂಪತಿ ದಿನ ದೂಡುತ್ತಿದ್ದಾರೆ. ಇವರ ವಿಷಯ ತಿಳಿದು ಸಮಾಜಸೇವಕ ವಿಶು ಶೆಟ್ಟಿ ಅವರು, ಹಿರಿಯ ನಾಗರಿಕ ಸಹಾಯವಾಣಿಯ ರಂಜಿತ್ ಜೊತೆಗೆ ತೆರಳಿ ತುರ್ತು ಆಹಾರ ಸಾಮಗ್ರಿಗಳನ್ನು ಪೂರೈಸಿ ಮಾನವೀಯತೆ ಮೆರೆದರು. ಉದಯ ಮರಕಾಲ(70) ಹಾಗೂ ಗುಲಾಬಿ(68) ಕಳೆದ 5 ವರ್ಷಗಳಿಂದ ದೃಷ್ಟಿ ಕಳೆದುಕೊಂಡಿದ್ದು,ಇವರಿಗೆ ಮಕ್ಕಳಿಲ್ಲ.ನಾಗರೀಕ ಸಮಾಜ‌ದ ಸಹಾಯ ಹಸ್ತ ಈ ವೃದ್ಧ ದಂಪತಿಗೆ ಬೇಕಿದೆ.

ವೃದ್ಧ ದಂಪತಿಗೆ ನೆರವು ನೀಡುವ ದಾನಿಗಳು ಹಿರಿಯ ನಾಗರಿಕ ಸಹಾಯವಾಣಿ(0820-2526394)ಯನ್ನು ಸಂಪರ್ಕಿಸಲು ಕೋರಲಾಗಿದೆ.

Edited By : Shivu K
Kshetra Samachara

Kshetra Samachara

16/12/2021 09:19 pm

Cinque Terre

5.58 K

Cinque Terre

1

ಸಂಬಂಧಿತ ಸುದ್ದಿ