ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಪೊಲೀಸ್‌ ಭಕ್ತಿ' ಆಟೋರಿಕ್ಷಾದಲ್ಲಿ ಅಭಿವ್ಯಕ್ತ!

ಆಟೋರಿಕ್ಷಾ ಸಹಿತ ನಾನಾ ವಾಹನಗಳಲ್ಲಿ ದೇವರ ಆಶೀರ್ವಾದ, ತಂದೆ-ತಾಯಿಯ ಆಶೀರ್ವಾದ ಹೀಗೆ ತಮ್ಮ ಭಕ್ತಿ-ಪ್ರೀತಿಯನ್ನು ತೋರ್ಪಡಿಸಿರುವ ಬರಹಗಳನ್ನು ನಾವು ಕಾಣುತ್ತೇವೆ ಹಾಗೂ ಅವರ ಈ ಸಾತ್ವಿಕ, ಸುಸಂಸ್ಕೃತಿ ಬಿಂಬಿಸುವ ಮನೋಧರ್ಮಕ್ಕೆ ಮನದಲ್ಲಿಯೇ ನಮಿಸುತ್ತೇವೆ.

ಆದರೆ, ಈ ಆಟೋರಿಕ್ಷಾ ಮಾಲೀಕರೊಬ್ಬರು ತನ್ನ ಮನಸ್ಸಿನಲ್ಲಿನ ಪೊಲೀಸರ ಕುರಿತ ಗೌರವ ಭಾವನೆಯನ್ನು ವ್ಯಕ್ತ ಪಡಿಸಲು ತನ್ನ ರಿಕ್ಷಾದಲ್ಲಿ "ಪೊಲೀಸರ ಆಶೀರ್ವಾದ" ಎಂದೇ ಬರೆಸಿದ್ದಾರೆ!. ದಿನನಿತ್ಯದ ಕಾಯಕದಲ್ಲಿ "ಪೊಲೀಸ್‌ ದರ್ಶನ" ಸಾಮಾನ್ಯವಾಗಿರುವುದರಿಂದ ಈ 'ಪದ ನಮನ' ಸೂಕ್ತವೇ ಆಗಿದೆ, ಅಲ್ವೇ?

Edited By : Nirmala Aralikatti
Kshetra Samachara

Kshetra Samachara

27/10/2021 01:04 pm

Cinque Terre

10.92 K

Cinque Terre

1

ಸಂಬಂಧಿತ ಸುದ್ದಿ