ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪತಿಗಾಗಿ ಹಿಂದೂ ಮಹಿಳೆಯ ಹೋರಾಟ ಅಂತ್ಯ, ನ್ಯಾಯ ಸಿಗದೇ ಪ್ರಕರಣಕ್ಕೆ ಇತಿಶ್ರಿ ಹಾಡಲು ನಿರ್ಧಾರ

ಮಂಗಳೂರು: ಅನ್ಯಕೋಮಿನ ವ್ಯಕ್ತಿಯನ್ನು ಮದುವೆಯಾಗಿ ಮತಾಂತರವಾಗಿದ್ದ ಹಿಂದೂ‌ ಮಹಿಳೆಯೋರ್ವರು ಪತಿಗಾಗಿ ಮಾಡುತ್ತಿದ್ದ ಹೋರಾಟಕ್ಕೆ ನ್ಯಾಯ ಸಿಗದೆ ಪ್ರಕರಣಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ.

ಕೇರಳ ಮೂಲದ ಆಸಿಯಾ ಮೂಲತಃ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಸುಳ್ಯದ ಇಬ್ರಾಹಿಂ ಕಲೀಲ್ ಕಟ್ಟೆಕಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಗಾಗಿ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು. ಆದರೆ ಆ ಬಳಿಕ ಇಬ್ರಾಹಿಂ ಕಲೀಲ್ ನಾಪತ್ತೆಯಾಗಿ ಪತ್ನಿಯಿಂದ ದೂರವಾಗಿದ್ದ. ಆತನನ್ನು ಬಳಿಕ ಪತ್ತೆ ಹಚ್ಚಲಾಗಿದ್ದರೂ ಆತ ಆಸಿಯಾಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಪತಿ ಬೇಕೆಂದು ಆಸಿಯಾ ಪ್ರತಿಭಟನೆ ಮೂಲಕ ಹೋರಾಟವನ್ನು ಮಾಡಿದ್ದರು. ಆದರೆ ಇಬ್ರಾಹಿಂ ಕಲೀಲ್ ಈಕೆಯ ಮಾತನ್ನು ಕೇಳದೆ ಆಸಿಯಾಳನ್ನು ಪತ್ನಿಯಾಗಿ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಪರಿಣಾಮ ಬೇಸತ್ತ ಆಸಿಯಾ ಪತಿಯಿಂದ ದೂರವಾಗಲು ಮುಂದಾಗಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಆಸಿಯಾ, ನಾನು ಈ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ. ಈವರೆಗೆ ನಾನು ಅಸೀಯಾ ಇಬ್ರಾಹಿಂ ಕಟ್ಟೆಕಾರ್ ಎಂದು ಗುರುತಿಸುತ್ತಿದ್ದೆ. ಇನ್ನು ಕೇವಲ ಅಸೀಯಾ ಆಗಿರುತ್ತೇನೆ. ಆತನಿಗಾಗಿ ಮಾಡಿದ ಹೋರಾಟ ಫಲಪ್ರದವಾಗಲಿಲ್ಲ. ಆತನಿಗೆ ಇಷ್ಟವಿಲ್ಲದಿದ್ದರೆ ಆತನೇ ನನ್ನಲ್ಲಿ ಬಂದು ಬೇಡ ಎಂದು ಹೇಳಬೇಕೆಂದು ಬಯಸಿದ್ದೆ.

ಇತ್ತೀಚೆಗೆ ಆತನನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ಆತ ನನ್ನನ್ನು ಬೇಡ ಎಂದು ತಿಳಿಸಿದ್ದಾನೆ. ಆದರೆ ಮುಂದೆ ನನ್ನ ಜೀವನ ಇದರಿಂದ ಹಾಳಾಗುವುದು ಬೇಡ ಎಂದು ಈ ಪ್ರಕರಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/10/2021 09:48 pm

Cinque Terre

22.04 K

Cinque Terre

10

ಸಂಬಂಧಿತ ಸುದ್ದಿ