ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಲ್ವರು ಮಕ್ಕಳನ್ನು ಕಳೆದುಕೊಂಡ ಅಸಹಾಯಕ ವೃದ್ಧೆಗೆ ಸಖಿ ಸೆಂಟರ್ ನಲ್ಲಿ ಆಶ್ರಯ

ಉಡುಪಿ: ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅಸಹಾಯಕ ವೃದ್ಧೆಯೋರ್ವರು ಆಶ್ರಯಕ್ಕಾಗಿ ದುಃಖಿಸುತ್ತಿದ್ದುದನ್ನು ಗಮನಿಸಿದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ಮಹಿಳಾ ಪೊಲೀಸ್ ಸಹಾಯದಿಂದ ಅವರನ್ನು ರಕ್ಷಿಸಿ ಸಖಿ ಒನ್ ಸ್ಟಾಪ್ ಸೆಂಟರ್ ಗೆ ದಾಖಲಿಸಿದ್ದಾರೆ.

ಮಹಿಳೆಯ ಹೆಸರು ಲಲಿತಮ್ಮ(75) ಎಂದು ತಿಳಿದುಬಂದಿದ್ದು ಮೂಲತಃ ದಾವಣಗೆರೆಯವರು. ಈಕೆಗೆ ನಾಲ್ವರು ಮಕ್ಕಳಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಎಲ್ಲರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಈಗ ವೃದ್ಧೆ ಅಸಹಾಯಕರಾಗಿದ್ದು, ಮಂಗಳೂರಿನಲ್ಲಿ ಸಂಬಂಧಿಕರಲ್ಲಿಗೆ ಆಶ್ರಯಕ್ಕಾಗಿ ಬಂದಿದ್ದು, ಸಂಬಂಧಿಕರು ಸಿಗದ ಕಾರಣ ಉಡುಪಿಯ ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿ ದುಃಖಿಸುತ್ತಿದ್ದರು. ಮುಂದಿನ ಇವರ ಆಶ್ರಯದ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಮಾಜಸೇವಕ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

20/09/2021 11:38 am

Cinque Terre

25.03 K

Cinque Terre

0

ಸಂಬಂಧಿತ ಸುದ್ದಿ