ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮದ ನೂರು ವರ್ಷ ಇತಿಹಾಸದ ಕೊಲಕಾಡಿ ಅನುದಾನಿತ ಕೆಪಿಎಸ್ ಕೆ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತಾ ಕಾರ್ಯಕ್ರಮ ಕೊಲಕಾಡಿ ಜನಸೇವಾ ಪರಿಷತ್ ಸಂಘಟನೆಯ ವತಿಯಿಂದ ನಡೆಯಿತು.
ಈ ಸಂದರ್ಭ ಸಂಘಟನೆಯ ಗೌರವಾಧ್ಯಕ್ಷರಾದ ಗಂಗಾಧರ್ ಶೆಟ್ಟಿ ಬರ್ಕೆ ತೋಟ ಮಾತನಾಡಿ ಕೊಲಕಾಡಿ ಜನಸೇವಾ ಪರಿಷತ್ ವತಿಯಿಂದ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಯಶಸ್ವಿಯಾಗಿ ನಡೆದಿದೆ. ಶತಮಾನ ಕಂಡ ಕೊಲಕಾಡಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದ್ದೇವೆ ಎಂದರು.
ಈ ಸಂದರ್ಭ ಕೊಲಕಾಡಿ ಜನಸೇವಾ ಪರಿಷತ್ ಅಧ್ಯಕ್ಷರಾದ ಅನಿಲ್ ಕೊಲಕಾಡಿ, ಕಾರ್ಯದರ್ಶಿ ಶರತ್ ಆಚಾರ್ಯ, ಕೋಶಾಧಿಕಾರಿ ಪ್ರಶಾಂತ ಆಚಾರ್ಯ, ನಿವೃತ್ತ ಶಿಕ್ಷಕ ಅಚ್ಚುತ ಮಾಸ್ತರ್, ಶಾಲಾ ಮುಖ್ಯೋಪಾಧ್ಯಾಯರಾದ ಗ್ರೆಟ್ಟಾ ರೋಡ್ರಿಗಸ್, ಅಂಬರೀಶ್ ಲಮಾಣಿ, ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ನಿತಿನ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/09/2021 03:26 pm