ವರದಿ: ದಾಮೋದರ ಮೊಗವೀರ ನಾಯಕವಾಡಿ.
ಬೈಂದೂರು: ಕಂಚುಗೋಡು ನರ ಬಾಧೆ ಸಮಸ್ಯೆಯಿಂದ ಬಳಲುತ್ತಿರುವ ಸುಬ್ರಹ್ಮಣ್ಯ ಖಾರ್ವಿ ಯವರ ಆರ್ಥಿಕ ಸಂಕಷ್ಟದ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಬಳಿಕ "ಸಹಾಯ ಹಸ್ತ "ಗ್ರೂಪ್ ತ್ರಾಸಿ ಸೇವಾ ಯೋಜನೆ ನೇತೃತ್ವದಲ್ಲಿ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಇಂದು ನೆರವೇರಿತು .
ಕುಂದಾಪುರ ತಾಲ್ಲೂಕಿನ ಹೊಸಾಡು ಗ್ರಾಮ ಕಂಚುಗೋಡು ನಿವಾಸಿಯಾದ ಸುಬ್ರಹ್ಮಣ್ಯ ಖಾರ್ವಿ ಹೊಕ್ಕುಳ ಬಳ್ಳಿ ಸಮಸ್ಯೆಯಿಂದ ಬಳಲುತ್ತಿದ್ದು ಹಾಗೂ ಸೂರು ಇಲ್ಲದೆ ಮುಳ್ಳಿಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಪತ್ನಿ ಅಂಗಡಿಯೊಂದರಲ್ಲಿ ಕೂಲಿ ಕೆಲಸ ಮಾಡಿ ಅವರ ದುಡಿಮೆಯಿಂದಲೇ ಸಂಸಾರ ನಿರ್ವಹಣೆ ಆಗಬೇಕಿದೆ .
ಸುಬ್ರಹ್ಮಣ್ಯ ಖಾರ್ವಿಗೆ ಔಷಧಿಯ ಖರ್ಚು ಹಾಗೂ ಬಡ ದಂಪತಿಗಳಿಗೆ ವಾಸಿಸಲು ಅನುಕೂಲಕ್ಕಾಗಿ ಸುಸಜ್ಜಿತವಾದ ಸಣ್ಣದೊಂದು ಮನೆ ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಿ ಹಾಗೂ 3ತಿಂಗಳ ಅವಧಿಯ ಒಳಗೆ ಪೂರ್ಣ ಮನೆಯೊಂದನ್ನು ನಿರ್ಮಿಸಿಕೊಡಲು ರವಿ ಶೆಟ್ಟಿಗಾರ್ ನೇತೃತ್ವದ "ಸಹಾಯ ಹಸ್ತ ಸೇವಾ "ತಂಡದ ಯುವಕರು ಮುಂದೆ ಬಂದಿದ್ದಾರೆ .
ಹೌದು ಬಡ ಮೀನುಗಾರಿಕಾ ಕುಟುಂಬದಲ್ಲಿ ಜನಿಸಿದ ಸುಬ್ರಹ್ಮಣ್ಯ ಖಾರ್ವಿ ಮೀನುಗಾರಿಕೆ ಮೂಲ ವೃತ್ತಿಯಾಗಿಸಿಕೊಂಡು ದುಡಿಯುತ್ತಿದ್ದರು .ಆದರೆ ಇಂತಹ ಸಮಯದಲ್ಲಿ ಕೆಲಸ ಮಾಡಲು ಅವರ ದೇಹ ಸ್ಪಂದಿಸದೆ ಇದ್ದ ಕಾರಣ ಪತ್ನಿ ದಿನ ಕೂಲಿ ಕೆಲಸ ಮಾಡಿ ಅವರ ದುಡಿಮೆಯಿಂದಲೇ ಸಂಸಾರ ನಿರ್ವಹಣೆ ಆಗಬೇಕಾಗಿದೆ .ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ದಿನ ನಡೆಸುವ ಬಡ ದಂಪತಿಗಳಿಗೆ ದಾನಿಗಳ ಸಹಾಯದ ನೆರವು ಬೇಕಾಗಿದೆ .
ಈ ಸಂದರ್ಭ ರವಿ ಶೆಟ್ಟಿಗಾರ್.ವೆಂಕಟೇಶ್ ಕಾರಂತ್ .ಸುಧೀರ್ ಖಾರ್ವಿ ಚೌಕಿ .ಉಮೇಶ್ ದೇವಾಡಿಗ .ರಮೇಶ್ ಖಾರ್ವಿ .ಕಾರ್ತಿಕ್ ಶೆಟ್ಟಿ ಗರ್ .ಹರೀಶ್ ಪೂಜಾರಿ .ಮಂಜುನಾಥ್ ಗಾಣಿಗ .ಮಾಬ್ಲೇಶ್ವರ ಗಾಣಿಗ .ಉಪಸ್ಥಿತರಿದ್ದರು
ಸಹಾಯಹಸ್ತ ಸೇವಾ ವೇದಿಕೆ ಹುಡುಗರ ಈ ಕಾರ್ಯ ಸಾಧನೆಗೆ ಊರಿನ ಜನರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು .
Kshetra Samachara
16/09/2021 04:34 pm