ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯ ಬ್ರಹ್ಮಗಿರಿಯ ಮೂಲ ಮನೆಗೆ ಆಸ್ಕರ್ ಪಾರ್ಥಿವ ಶರೀರ ಆಗಮನ

ಉಡುಪಿ: ನಿನ್ನೆ ವಿಧಿವಶರಾದ ರಾಜ್ಯಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರವನ್ನು ಉಡುಪಿಯ ಬ್ರಹ್ಮಗಿರಿಯ ಮೂಲ ಮನೆಗೆ ತರಲಾಯಿತು. ನಗರದ ಬ್ರಹ್ಮಗಿರಿ ಸರ್ಕಲ್ ಬಳಿಯಿರುವ ಆಸ್ಕರ್ ಫರ್ನಾಂಡಿಸ್ ಮನೆ ಇದಾಗಿದೆ.ಇದಕ್ಕೂ ಮುನ್ನ ಶೋಕಮಾತಾ ಚರ್ಚ್ ನಲ್ಲಿ ಪ್ರಾರ್ಥನಾ ವಿಧಿಗಳು ಬಿಷಪ್ ನೇತೃತ್ವದಲ್ಲಿ ಜರುಗಿದವು.ಬಳಿಕ ಆಸ್ಕರ್ ಫರ್ನಾಂಡಿಸ್ ಹುಟ್ಟಿ ಬೆಳೆದ ಮನೆಗೆ ಪಾರ್ಥಿವ ಶರೀರವನ್ನು ತರಲಾಯಿತು.ತಂದೆ ರೋಕಿ ಫರ್ನಾಂಡಿಸ್ ಅವರು ಕಟ್ಟಿಸಿದ್ದ ಈ ಮನೆ ಹಿಂದೆ ಜಿಲ್ಲಾ ಕಾಂಗ್ರೆಸ್ ಕಚೇರಿ ಆಗಿತ್ತು.ಸದ್ಯ ಈ ಮನೆಯಲ್ಲಿ ಯಾರೂ ವಾಸ ವಿಲ್ಲ.

ಮೂಲ ಮನೆಯಲ್ಲಿ ಪಾರ್ಥಿವ ಶರೀರ ಇರಿಸಿ ಪ್ರಾರ್ಥನೆ ನಡೆಸಿ ನಂತರ ಕಾಂಗ್ರೆಸ್ ಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.ಮಧ್ಯಾಹ್ನ ಡಿಕೆಶಿ ಸಹಿತ ಹಲವು ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ.

Edited By : Shivu K
Kshetra Samachara

Kshetra Samachara

14/09/2021 11:41 am

Cinque Terre

23.01 K

Cinque Terre

0

ಸಂಬಂಧಿತ ಸುದ್ದಿ