ಮಂಗಳೂರು: ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರ ಅವರ ರಾಜಕೀಯ ಕ್ಷೇತ್ರ ಉಡುಪಿಗೆ ಕೊಂಡೊಯ್ಯಲಾಯಿತು.
9.15 ಸುಮಾರಿಗೆ ಉಡುಪಿ ತಲುಪಲಿದ್ದು, ಅಲ್ಲಿ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 11 ಗಂಟೆಗೆ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಹೊರಟು 11.30 ರಿಂದ1.30 ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಬಳಿಕ 2.30ಕ್ಕೆ ಅಲ್ಲಿಂದ ಸುಮಾರಿಗೆ ಹೊರಟು 3.30ಗೆ ಮಂಗಳೂರು ತಲುಪಲಿದೆ. 3.30ಯಿಂದ 5.30 ವರೆಗೆ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮತ್ತೆ ಪಾರ್ಥಿವ ಶರೀರವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗುತ್ತದೆ. ಸೆ.16 ರಂದು ಬೆಂಗಳೂರಿನ ಸೈಂಟ್ ಪೆಟ್ರಿಕ್ಸ್ ಚರ್ಚ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
Kshetra Samachara
14/09/2021 08:43 am