ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ದಂಪತಿಗೆ ಗಾಯಗೊಳಿಸಿ ಮರವೇರಿ ಕುಳಿತಿದ್ದ ಚಿರತೆ ಕೊನೆಗೂ ಸೆರೆ

ಕಡಬ: ದಂಪತಿಗೆ ದಾಳಿ ಮಾಡಿ ಮರವೇರಿ ಕುಳಿತಿದ್ದ ಚಿರತೆಯನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಕೊನೆಗೂ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಪಿಳಿಕುಳದ ನುರಿತ ಶೂಟರ್ ಡಾ. ಯಶಸ್, ಸುಳ್ಯ ಎಸಿಎಫ್ ಆಸ್ಟಿನ್ ಪಿ.ಸೋನ್ಸ್, ವಲಯಾಧಿಕಾರಿಗಳಾದ ರಾಘವೇಂದ್ರ, ಮಂಜುನಾಥ್, ಹಾಗೂ ಸಿಬ್ಬಂದಿ ಚಿರತೆಯನ್ನು ಬಂಧಿಯಾಗಿಸಿದ ತಂಡದಲ್ಲಿದ್ದರು.

ಈ ಚಿರತೆ ಕಡಬದ ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿಯ ಹೇರ ನಿವಾಸಿಗಳಾದ ಶೇಖರ್ ಕಾಮತ್- ಸೌಮ್ಯ ಕಾಮತ್ ದಂಪತಿ ಇಂದು ಮುಂಜಾವ ತೋಟಕ್ಕೆ ಪೈಪ್ ಜೆಟ್ ಬದಲಾಯಿಸಲೆಂದು ತೆರಳಿದ್ದ ವೇಳೆ ದಾಳಿ ನಡೆಸಿ, ಗಾಯಗೊಳಿಸಿತ್ತು. ತಕ್ಷಣ ಈ ಇಬ್ಬರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ‌.

Edited By : Manjunath H D
Kshetra Samachara

Kshetra Samachara

12/02/2021 03:06 pm

Cinque Terre

24.63 K

Cinque Terre

0

ಸಂಬಂಧಿತ ಸುದ್ದಿ