ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸಾಹಿತ್ಯ ಹಿನ್ನಡೆ ಕಾಣುತ್ತಿದ್ದರೂ ನಾನಾ ಪ್ರಕಾರಗಳಲ್ಲಿ ಇನ್ನೂ ಜೀವಂತ"

ಮಂಗಳೂರು: ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿ ಇದೆ. ಆದರೆ, ಬದುಕಿನ ಮೂಲಭೂತ ಸೌಕರ್ಯ ನೀರು, ಗಾಳಿಯಷ್ಟೇ ಅಗತ್ಯವಿರುವ ಸತ್ವಪೂರ್ಣ ಸಾಹಿತ್ಯವು ಇಂದು ಹಿನ್ನಡೆ ಕಾಣುತ್ತಿದ್ದರೂ ವಿವಿಧ ಪ್ರಕಾರಗಳ ಮೂಲಕ ಇನ್ನೂ ಜೀವಂತವಿದೆ ಎಂದು ಸಿಆರ್ ಎಸ್ ಎಂಆರ್ ಪಿಎಲ್ ನ ಉಪ ಮಹಾಪ್ರಬಂಧಕಿ ವೀಣಾ ಟಿ.ಶೆಟ್ಟಿ ಹೇಳಿದರು.

ದ.ಕ.ಜಿಲ್ಲಾ ಕಸಾಪ, ಕಸಾಪ ಮಂಗಳೂರು ಘಟಕದ ವತಿಯಿಂದ ನಗರದ ಪಣಂಬೂರು ಶ್ರೀ ನಂದನೇಶ್ವರ ದೇವಳದ ಸಭಾಂಗಣದಲ್ಲಿ ನಡೆದ ಮಂಗಳೂರು ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭರತನಾಟ್ಯ ನೋಡಿದರೆ ಅದರಲ್ಲೂ ಸಾಹಿತ್ಯವಿದೆ. ಅಲ್ಲೂ ರಾಮಾಯಣ, ಮಹಾಭಾರತದ ಕಥಾ ತುಣುಕುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಅದನ್ನು ನಮ್ಮ ಮುಂದೆ ತೆರೆದಿಡುವ ಪ್ರಕಾರ ಮಾತ್ರ ಬೇರೆ, ಸಿನಿಮಾದಲ್ಲೂ ಸಾಹಿತ್ಯವಿದೆ. ಆದ್ದರಿಂದ ಸಾಹಿತ್ಯ ಎಲ್ಲೂ ಹೋಗಿಲ್ಲ. ಆದರೆ, ಓದುವಿಕೆಯಿಂದ ದೊರಕುವ ಸಂತೋಷ ಹಾಗೂ ಜ್ಞಾನ ಬೇರೆಲ್ಲೂ ಸಿಗುವುದಿಲ್ಲ ಎಂದರು.

ನಾನು ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದವಳು. ಅದೇ ರೀತಿ ನಮಗೆ ಕೃಷಿಕ ಕುಟುಂಬದಲ್ಲಿನ ಬಡತನ ಇತ್ತು‌. ಆದರೆ, ನಮ್ಮಲ್ಲಿ ಸಮೃದ್ಧವಾಗಿದ್ದುದು ಮೌಲ್ಯಗಳು ಮಾತ್ರ. ಇದೇ ಮೌಲ್ಯ ನಮ್ಮನ್ನು ಈಗಿರುವ ಎತ್ತರಕ್ಕೆ ಬೆಳೆದಿದೆ. ಸಾಹಿತ್ಯ ಕೂಡ ಪ್ರಭಾವಶಾಲಿಯಾಗಿ ನನ್ನ ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ. ಬಡತನವಿದ್ದ ಕಾರಣ ಬೇಕಾದಷ್ಟು ಪುಸ್ತಕ ಸಿಗದ ಕಾರಣ, ದಿನಸಿ ಸಾಮಗ್ರಿ ಕಟ್ಟಿ ಕೊಡುತ್ತಿದ್ದ ಪೇಪರ್ ಚೂರುಗಳೇ ಓದಿನ‌ ಆಕಾರವಾಗುತ್ತಿತ್ತು. ಅಲ್ಲಿಂದ ಪ್ರಾರಂಭವಾದ ಓದಿನ ಸಾಂಗತ್ಯ ಈವತ್ತಿಗೂ ನಿಂತಿಲ್ಲ ಎಂದರು.

ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಸಮ್ಮೇಳನಾಧ್ಯಕ್ಷ ಹಿರಿಯ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತ, ಉಪಮೇಯರ್ ವೇದಾವತಿ, ಮಾಜಿ ಕಸಾಪ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/02/2021 07:16 pm

Cinque Terre

23.65 K

Cinque Terre

0

ಸಂಬಂಧಿತ ಸುದ್ದಿ