ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೈಬ್ರಕಟ್ಟೆ ಸಂತೆಯಲ್ಲಿ ಮಕ್ಕಳಿಂದ ತರಕಾರಿ ಮಾರಾಟ; ಮಕ್ಕಳ ರಕ್ಷಣಾ ಘಟಕದಿಂದ ಪಾಲಕರಿಗೆ ಕಾನೂನು ಅರಿವು

ಉಡುಪಿ: ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಅವರನ್ನು ಕೆಲಸಕ್ಕೆ ಕಳಿಸುವುದು, ಕೆಲಸ ಮಾಡಿಸುವುದು ತಪ್ಪು. ಈ ಬಗ್ಗೆ ಪಾಲಕರು ಕಾನೂನು ಅರಿಯಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ತಿಳಿವಳಿಕೆ ಮೂಡಿಸಿದರು‌.

ಉಡುಪಿ ಜಿಲ್ಲೆಯ ಸೈಬ್ರಕಟ್ಟೆ ಸಂತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಂಗಳವಾರ ಕಾರ್ಯಾಚರಣೆ ಕೈಗೊಂಡಿದ್ದು, ಸಂತೆಯಲ್ಲಿ ಪೋಷಕರೊಂದಿಗೆ ಮಕ್ಕಳು ತರಕಾರಿ ಮತ್ತು ಹಣ್ಣು ವ್ಯಾಪಾರದಲ್ಲಿ ನಿರತರಾಗಿರುವವರನ್ನು ಗಮನಿಸಿ ಪೋಷಕರಿಗೆ ಎಚ್ಚರಿಕೆ ನೀಡಿದರು.

ಸಂತೆಯಲ್ಲಿದ್ದ ಬಾಲಕರು ಶಾಲೆಗೆ ಹೋಗುವ ಬಗ್ಗೆ‌ ಆಯಾಯ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ಖಚಿತ ಪಡಿಸಿಕೊಂಡು ಸಂತೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬಾರದೆಂದು ಎಚ್ಚರಿಸಿ ಮೂವರು ಬಾಲಕರನ್ನು ಅವರ ಪೋಷಕರ ವಶಕ್ಕೆ ನೀಡಲಾಯಿತು.

ಸಂತೆ ಮಾರ್ಕೆಟ್ ನಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಮತ್ತು ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ನೆರೆದ ಜನರಿಗೆ ಹಾಗೂ ಸಂತೆಯ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು.

ಸಮಾಜ ಕಾರ್ಯಕರ್ತೆ ಸುರಕ್ಷಾ ಉಪಸ್ಥಿತರಿದ್ದರು. ‌

Edited By : Manjunath H D
Kshetra Samachara

Kshetra Samachara

09/02/2021 03:59 pm

Cinque Terre

19.15 K

Cinque Terre

0

ಸಂಬಂಧಿತ ಸುದ್ದಿ