ಕಾಪು: ಉಡುಪಿ ಜಿಲ್ಲೆಯ ಕಾಪು ರಾಷ್ಟ್ರೀಯ ಹೆದ್ದಾರಿ ನಡುವಿನ ಡಿವೈಡರ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ-ಹಗಲು ಮಲಗಿದ್ದ ಮನೋರೋಗಿ,
ಅಪರಿಚಿತ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಿಳೆಯು ತಮಿಳು ಭಾಷೆಯ ವರಾಗಿದ್ದು ಸುಮಾರು ಐವತ್ತರ ಹರೆಯದವರು. ರಕ್ಷಣೆ ಕಾರ್ಯಾಚರಣೆಯ ಸಮಯದಲ್ಲಿ ಇಲಾಖಾ
ಮಹಿಳಾ ಸಿಬ್ಬಂದಿಯು ದೊರೆಯದೇ ಇದ್ದುದರಿಂದ ಕಿದಿಯೂರು ಐರಿನ್ ಅಂದ್ರಾದೆಯವರು ಹಾಗೂ ಕಾಪು ಪೊಲೀಸರ ಸಹಾಯ ಪಡೆಯಲಾಯಿತು.
ಮಹಿಳೆಯು ಗಲಾಟೆ ಮಾಡುವುದರ ಜೊತೆಗೆ ಹಲ್ಲೆಗೂ ಮುಂದಾಗಿದ್ದರು. ಬಹಳ ಸಮಯದ ಮನವೊಲಿಕೆ ಬಳಿಕ ಮಹಿಳೆಯನ್ನು ವಿಶು ಶೆಟ್ಟಿಯವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದರು.
Kshetra Samachara
28/12/2020 04:27 pm