ನೀಲಾವರ: ಪ್ರಕೃತಿ ಮತ್ತು ಪರಿಸರದ ಜೊತೆಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ಅವಿನಾಭಾವ ಸಂಬಂಧ.
ಪರಿಸರಕ್ಕೆ ಸಂಬಂಧಿಸಿದ ಪ್ರತಿ ವಿಷಯದಲ್ಲೂ ಸದಾಕಾಲ ಇವರು ಪ್ರಯೋಗಶೀಲರು.
ತೆಂಗಿನ ಗರಿ ಬಳಸಿ ಹಾವನ್ನು ಹಿಡಿಯುವ ಸರಳ ವಿಧಾನದ ವಿಡಿಯೋ ಒಂದು ಇತ್ತೀಚಿಗೆ ವೈರಲ್ ಆಗಿತ್ತು. ಇದೀಗ ಪೇಜಾವರ ಶ್ರೀಗಳು ವಿಷವಿಲ್ಲದ ಹಾವು ಹಿಡಿಯುವ ಇನ್ನೊಂದು ಸರಳ ವಿಧಾನ ವಿಡಿಯೋ ಮೂಲಕ ಪರಿಚಯಿಸಿದ್ದಾರೆ.
ಕೊಳಲಿನ ಆಕಾರದಲ್ಲಿ ಪೇಪರ್ ಸುತ್ತಿ, ನಡುವಿಗೆ ಹಗ್ಗದಿಂದ ಬಿಗಿದು ಕಟ್ಟಿ, ಹಾವು ಹಿಡಿಯುವ ವಿಧಾನ ಅತ್ಯಂತ ಸುಲಭ ಮಾರ್ಗ ದ್ದಾಗಿದೆ.ಪುಟ್ಟ ಹಾವನ್ನು ಬಾಲದಿಂದ ಬಿಗಿಯಾಗಿ ಹಿಡಿದು ಬಿಲದ ಆಕಾರದಲ್ಲಿರುವ ಪೇಪರ್ ಪೊಟರೆಯೊಳಗೆ ಹಾವು ಒಳನುಗ್ಗುವಂತೆ ಮಾಡಲಾಗುತ್ತೆ.
ಬಳಿಕ ಪೇಪರನ್ನು ಕೊಳವೆಯೊಳಗೆ ಬಂದ್ ಮಾಡಿ ಸುರಕ್ಷಿತವಾಗಿ ಹಾವನ್ನು ರಕ್ಷಿಸಬಹುದಾಗಿದೆ. ವಿಷ ಇಲ್ಲದ ಸಣ್ಣಪುಟ್ಟ ಹಾವುಗಳನ್ನು ಈ ಸರಳ ವಿಧಾನದ ಮೂಲಕ ಹಿಡಿದು ಹಾವುಗಳನ್ನು ರಕ್ಷಿಸಲು ಸಾಧ್ಯವಾಗಲಿದೆ. ಸದ್ಯ ಈ ವಿಡಿಯೋ ನೋಡಿದ ಜನ ಹಾವನ್ನು ಸುಲಭವಾಗಿ ಹೀಗೂ ಹಿಡಿಯಬಹುದೇ ಎಂದು ಅಚ್ಚರಿ ಪಡುತ್ತಿದ್ದಾರೆ.
Kshetra Samachara
01/10/2020 04:35 pm