ಉಡುಪಿ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮರಳು ಶಿಲ್ಪ ಕಲಾವಿದರು, ಸಮುದ್ರದ ದಡದಲ್ಲಿ ರಚಿಸಿದ ಗಣೇಶನ ಮರಳು ಶಿಲ್ಪ ನೋಡುಗರನ್ನು ಆಕರ್ಷಿಸುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ 'ಸ್ಯಾಂಡ್ ಥೀಂ' ತಂಡದ ಹರೀಶ್ ಸಾಗಾ ಹಾಗೂ ರಾಘವೇಂದ್ರ ಎಂಬವರು ವಿಶೇಷ ಮರಳು ಶಿಲ್ಪ ರಚಿಸಿದ್ದು, ಪ್ರಕೃತಿಯ ದ್ಯೋತಕವಾಗಿ ಹಾಳೆಯ ಕಿರೀಟವನ್ನು ಗಣೇಶನಿಗೆ ಇರಿಸಿದ್ದಾರೆ.
ಇನ್ನು ಕೊರೋನಾ ದಿಂದ ಸುರಕ್ಷಿತವಾಗಿರಿ ಎಂಬ ಸಂದೇಶ ಬರೆಯಲಾಗಿದ್ದು, ಮುಖ ಹಾಗೂ ಕೈಗಳಿಗೆ ಹರಿಸಿನದ ಬಣ್ಣ ಬಳಿಯಲಾಗಿದೆ. ಸದ್ಯ ಕಡಲ ತೀರದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ ಈ ವಿಶೇಷ ಮರಳು ಶಿಲ್ಪಕಲಾಕೃತಿ..
Kshetra Samachara
09/09/2021 03:45 pm