ಕುಂದಾಪುರದ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆಯುವ ಮಾರಿ ಹಬ್ಬಕ್ಕೆ ಸ್ಥಳೀಯ ಶ್ರೀ ಮಹಾಶಕ್ತಿ ಫ್ಲವರ್ ಸ್ಟಾಲ್ ನ ಮಾಲಿಕರಾದ ಪ್ರಕಾಶ್. ಆರ್. ಖಾರ್ವಿ ದೇವಾಲಯವನ್ನು ನಾನ ಬಗೆಯ ಪುಷ್ಪಗಳಿಂದ ಅಲಂಕಾರಗೊಳಿಸಿ ಪ್ರತಿವರ್ಷ ತಮ್ಮ ಹರಕೆಯನ್ನು ತೀರಿಸುತ್ತಿದ್ದಾರೆ.
ಅದೇ ರೀತಿ ಕಳೆದ ನಾಲ್ಕು ವರ್ಷಗಳಿಂದ ಮಹಾಕಾಳಿ ದೇವಾಲಯದ ಮಾರಿ ಹಬ್ಬಕ್ಕೆ ದೇವಾಲಯವನ್ನು ಹೂವಿನಿಂದ ಅಲಂಕಾರಗೊಳಿಸಿದ್ದು, ದೇವಾಲಯಕ್ಕೆ ಬರುವ ಭಕ್ತರು ವಿಶೇಷ ಪುಷ್ಪಾಲಂಕಾರ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ದೇವಾಲಯಕ್ಕೆ ಆಗಮಿಸಿದಾಗ ಹೂವಿನ ಅಲಂಕಾರ ನೋಡಿದಾಗ ಭಕ್ತರೂ ಮೈಮರೆಯುತ್ತಿದ್ದಾರೆ. ಹೂವಿನಿಂದ ದೇವಾಲಯನ್ನು ಅಲಂಕಾರಗೊಳಿಸಿದ್ದು ಆಲಯದಲ್ಲಿ ಎಲ್ಲೆಡೆ ಹೂವುಗಳೇ ಕಣ್ಣಿಗೆ ಬೀಳುತ್ತಿದೆ.
ತನ್ನ ಭಕ್ತಿಭಾವದ ಹರಕೆಯ ಸಲುವಾಗಿ ಪ್ರತಿ ವರ್ಷ ಹೂವಿನ ಅಲಂಕಾರವನ್ನು ಮಾಡುವ ಕಾರ್ಯಕ್ಕೆ ಭಕ್ತಸಾಗರವೇ ಮೆಚ್ಚುಗೆ ವ್ಯಕ್ತಪಡಿಸಿದೆ, ತನ್ನ ಕೊನೆಯುಸಿರಿರುವ ತನಕ ದೇವರಿಗೆ ಹೂವಿನ ಅಲಂಕಾರವನ್ನು ಮಾಡುವುದಾಗಿ ಖಾರ್ವಿಯವರ ನಿರ್ಧಾರ ಮಾಡಿದ್ದಾರೆ.
Kshetra Samachara
27/02/2021 12:47 pm