ಮುಲ್ಕಿ: ಬಿಸಿಬಿಸಿ ಕಾಯುತ್ತಿರುವ ಎಣ್ಣೆಯಲ್ಲಿ ಅತೀ ವೇಗದಲ್ಲಿ ಪಕೋಡ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ನಾಗಪುರದ ರವಿ ನಗರ್ ಚೌಕ್ ಎಂಬಲ್ಲಿ ರಾಜ್ ಎಂಬವರು ಬಿಸಿ ಬಿಸಿ ಎಣ್ಣೆಯಲ್ಲಿ ಪಕೋಡ ಮಾಡುತ್ತಿರುವ ದೃಶ್ಯದ ವಿಡಿಯೋ ಕಾಣುತ್ತಿದೆ. ಆ ವ್ಯಕ್ತಿ ಬಿಸಿ ಬಿಸಿ ಎಣ್ಣೆಯಲ್ಲಿ ಕೈ ಹಾಕುವುದರ ಮುಖಾಂತರ ಪಕೋಡವನ್ನು ಮತ್ತು ಮತ್ತಷ್ಟು ಗರಂ ಆಗಿ ಕಾಯಿಸುವ ದೃಶ್ಯ ನೋಡುವವರಿಗೆಝಲ್ಲೆನಿಸುತ್ತಿದೆ. ಸುಮಾರು ಮೂರು ನಿಮಿಷಗಳ ಈ ವಿಡಿಯೋದಲ್ಲಿ ಫಟಾಫಟ್ ಪಕೋಡ ಮಾಡಿ ಕ್ಯಾಂಟೀನಿಗೆ ಬರುವ ಗ್ರಾಹಕರಿಗೆ ಸ್ವಯಂ ಆತನೇ ಚಟ್ನಿ ಹಾಕಿ ಪಕೋಡ ಕೊಡುವ ದೃಶ್ಯ ಕಾಣುತ್ತಿದ್ದು ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
Kshetra Samachara
08/11/2020 02:17 pm