ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಾವು ಕೈಯಲ್ಲಿ ಗಲಾಟೆ ಮಾಡ್ತೀವಿ: ಅವರು ಗನ್ನಲ್ಲಿ ಗಲಾಟೆ ಮಾಡುತ್ತಾರೆ! ಅಫ್ಘಾನಿಸ್ಥಾನದಿಂದ ವಾಪಾಸಾದವನ ಮಾತು

ವರದಿ: ರಹೀಂ ಉಜಿರೆ

ಬ್ರಹ್ಮಾವರ : ಅಪಘಾನಿಸ್ಥಾನದಲ್ಲಿ ಸರಕಾರ ಪತನಗೊಂಡು ತಾಲಿಬಾನಿಗಳು ಮೇಲುಗೈ ಸಾಧಿಸಿದ್ದು ಹಳೆಯ ಸುದ್ದಿ.ತಾಲಿಬಾನ್ ನೆಲದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಭಾರತೀಯರು ಅಲ್ಲಿಂದ ತಮ್ಮ ದೇಶಕ್ಕೆ ವಾಪಸಾಗಿದ್ದಾರೆ. ಈ ಪೈಕಿ ಉಡುಪಿಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಮಂಜುನಾಥ್ ಕೂಡ ಒಬ್ಬರು.

ಮಂಜುನಾಥ್ ಅಪಘಾನಿಸ್ಥಾನದಲ್ಲಿ ಯುಎಸ್ ಆರ್ಮಿಯ ಮೆಂಟೇನೆನ್ಸ್ ಮೆಕ್ಯಾನಿಕ್ ಆಗಿದ್ದರು. ಇವತ್ತು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಮಂಜುನಾಥ್ ,ನಾನು ಯುಎಸ್ ಆರ್ಮಿ ಕ್ಯಾಂಪ್ ನಲ್ಲಿದ್ದೆ.ನಮಗೆ ಹೊರ ಪ್ರಪಂಚದ ಆಗುಹೋಗುಗಳು ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಬೇಸ್ ಒಳಗಡೆ ನಮಗೆ ಯಾರ ಸಂಪರ್ಕವೂ ಇರಲಿಲ್ಲ. ಆದರೆ ಹೊರಗಡೆ ತಾಲಿಬಾನ್ ಮತ್ತು ಸ್ಥಳೀಯರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇಲ್ಲಿ ನಾವು ಕೈ- ಬಾಯಲ್ಲಿ ಜಗಳ ಮಾಡುತ್ತೇವೆ, ಆದರೆ ತಾಲಿಬಾನೀಯರು ಗನ್ನಲ್ಲೆ ಗಲಾಟೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ವಶ ಆಗುತ್ತಿರುವುದು ಅಲ್ಲಿಯ ಜನರಿಗೆ ಮೊದಲೇ ಗೊತ್ತಿತ್ತು. ಅವರಿಗೆ ಅದೇನು ವಿಶೇಷವಲ್ಲ. ಮೊನ್ನೆ ಟೇಕ್ ಓವರ್ ಆಗುವಾಗ, ಸ್ವಲ್ಪ ಅರಾಜಕತೆ ಸೃಷ್ಟಿಯಾಯಿತು. ನಂತರ ಅಲ್ಲಿ ಶಾಪ್ಗಳು, ಮಾಲ್ಗಳು ಎಲ್ಲ ಓಪನ್ ಆಗಿವೆ.ಅಲ್ಲಿ ಮಂಗಳೂರು, ಕುಂದಾಪುರ, ಉಡುಪಿಯ ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು.ಅವರೆಲ್ಲರೂ ತಾಯ್ನಾಡಿಗೆ ವಾಪಸಾಗಿದ್ದಾರೆ. ಯುಎಸ್ ಆರ್ಮಿಯವರು ಮೊದಲೇ ನಮ್ಮನ್ನೆಲ್ಲ ಸೇಫಾಗಿ ನಮ್ಮ ನಮ್ಮ ದೇಶಗಳಿಗೆ ಕಳುಹಿಸಿದ್ದಾರೆ ಎಂದು ನಿಟ್ಟುಸಿರು ಬಿಡುತ್ತಾ ಮಂಜುನಾಥ್ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

19/08/2021 05:43 pm

Cinque Terre

21.32 K

Cinque Terre

5

ಸಂಬಂಧಿತ ಸುದ್ದಿ