ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಕಾರ್ಯಕ್ಕೆ ಪ್ರಶಂಸೆಯ ಸುರಿಮಳೆ

ಮೂಡುಬಿದಿರೆ: ಸಮಾಜಕ್ಕೆ ಒಳಿತು ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಸಮಾನ ಮನಸ್ಕರ ಯುವಕರ ತಂಡವೊಂದು ಬಡವರು, ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿರುವ ಕಾರ್ಯ ಮಾಡುತ್ತಿದ್ದಾರೆ. ಆ ತಂಡವೇ ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್.

ಈ ತಂಡ ಮೊದಲು ಶುರುವಾಗಿದ್ದು ವಾಟ್ಸಾಪ್ ಮೂಲಕ. ಆರಂಭದ ದಿನದಲ್ಲಿ ಅನಾಥರಿಗೆ, ಭಿಕ್ಷುಕರಿಗೆ ರವಿವಾರದಂದು ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಆರಂಭ ಮಾಡಿದರು. ಈ ರೀತಿಯ ಸಮಾಜಮುಖಿ ಕಾರ್ಯವು 2017 ರಿಂದ ಪ್ರಾರಂಭವಾಯಿತು. ನಂತರ ಕನ್ನಡ ಶಾಲೆಗಳ ಉಳಿವಿಗಾಗಿ ತಂಡ ಮುಂದಾಯಿತು.

ಪ್ರತಿ ವರ್ಷ ವಿಲ್ ಮೇಕ್ ಇಟ್ ಕಲರ್‌ಫುಲ್ ಎಂಬ ಪರಿಕಲ್ಪನೆಯಲ್ಲಿ ಹಲವಾರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ನವೀಕರಿಸುವ ಮೂಲಕ ರಾಜ್ಯದ ವಿವಿಧ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸುಂದರಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುವಂತಹ ಚಿತ್ರಗಳನ್ನು ಶಾಲೆಯಲ್ಲಿ ಬಿಡಿಸಿ, ಬಣ್ಣ ಬಳಿಯುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವಂತೆ ಮಾಡಿದೆ..

ಕಳೆದ ಐದು ವರ್ಷಗಳಿಂದ ಈ ತಂಡ ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸುತ್ತಾ ಬಂದಿದೆ. ನಕ್ಸಲ್‌ಪೀಡಿತ ಪ್ರದೇಶದಲ್ಲಿರುವ ಗ್ರಾಮೀಣ ಶಾಲೆಗಳಲ್ಲೂ ಈ ತಂಡವು ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದರಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.. ಈ ತಂಡದಿಂದ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂಬುದು ನಮ್ಮ ಆಶಯವೂ ಆಗಿದೆ.

-ರಂಜಿತಾ, ಪಬ್ಲಿಕ್ ನೆಕ್ಸ್ಟ್ ಮೂಡುಬಿದಿರೆ

Edited By : Shivu K
Kshetra Samachara

Kshetra Samachara

07/06/2022 01:46 pm

Cinque Terre

11.45 K

Cinque Terre

1

ಸಂಬಂಧಿತ ಸುದ್ದಿ