ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ವಿವಾಹ ವಾರ್ಷಿಕೋತ್ಸವವನ್ನು ಮಾದರಿಯಾಗಿ ಆಚರಿಸಿದ ಅನಿವಾಸಿ ಭಾರತೀಯ!

ಉಳ್ಳಾಲ: ತಾವು ಕಲಿತ ಸರಕಾರಿ ಶಾಲಾ ಮಕ್ಕಳೆಲ್ಲರಿಗೂ ಉಚಿತ ನೋಟ್ ಪುಸ್ತಕ,ಅಶಕ್ತ ಕುಟುಂಬದ ಯುವತಿ ಮದುವೆಗೆ ಸಹಾಯಧನ ನೀಡುವುದರ ಮೂಲಕ ಮಸ್ಕತ್ ಉದ್ಯೋಗಿ ಪ್ರವೀಣ್ ಶೆಟ್ಟಿ ಮೇಗಿನ ಮನೆ ಮತ್ತು ಲಾವಣ್ಯ ಶೆಟ್ಟಿ ದಂಪತಿ ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನ ಮಾದರಿಯಾಗಿ ಆಚರಿಸಿದ್ದಾರೆ.

ಅನಿವಾಸಿ ಭಾರತೀಯ ಪ್ರವೀಣ್ ಶೆಟ್ಟಿ ಮತ್ತು ಅವರ ಪತ್ನಿ ಲಾವಣ್ಯ ಶೆಟ್ಟಿ ಅವರು ಇಂದು ತಮ್ಮ ಹತ್ತನೇ ವಿವಾಹ ವರ್ಷಾಚರಣೆ ಆಚರಿಸುತ್ತಿದ್ದು ಆ ಪ್ರಯುಕ್ತ ತಾವುಗಳು ವಿದ್ಯಾರ್ಜನೆಗೈದ ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 8 ನೇ ತರಗತಿಯ ಎಲ್ಲಾ ಮಕ್ಕಳಿಗೂ ಗುಣ ಮಟ್ಟದ ನೋಟ್ ಪುಸ್ತಕಗಳನ್ನ ನೀಡಿದ್ದಾರೆ.ಪ್ರವೀಣ್ ಅವರ ಪತ್ನಿ ಲಾವಣ್ಯ ಶೆಟ್ಟಿ ಮತ್ತು ತಾಯಿ ಮೀನಾಕ್ಷಿ ಶೆಟ್ಟಿ ಅವರು ಶಾಲಾ ಮಕ್ಕಳಿಗೆ ಪುಸ್ತಕಗಳನ್ನ ವಿತರಿಸಿದರು.

ಇಷ್ಟಲ್ಲದೆ ಈ ತಿಂಗಳ ಕೊನೆಯಲ್ಲಿ ನಡೆದಿದ್ದ ಪಜೀರು ಗ್ರಾಮದ ಅಶಕ್ತ ಕುಟುಂಬದ ಯುವತಿಯೋರ್ವಳ ಮದುವೆಗೂ ಪ್ರವೀಣ್ ಅವರು 15,000 ರೂಪಾಯಿ ಸಹಾಯಧನ ನೀಡಿ ಮಾದರಿಯಾಗಿದ್ದಾರೆ.

ಪಿಲಾರು ಶಾಲೆಯ ಹಳೇ ವಿದ್ಯಾರ್ಥಿಗಳು ಸೇರಿ ಸುಮಾರು ಒಂದು ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ಥಿ ಮತ್ತು ಪೈಂಟಿಂಗ್ ಕೆಲಸ ಮಾಡಿದ್ದು,ಪ್ರವೀಣ್ ಶೆಟ್ಟಿಯವರು ಈ ಕಾರ್ಯಕ್ಕೂ ದೊಡ್ಡ ಆರ್ಥಿಕ ಸಹಾಯವನ್ನ ನೀಡಿದ್ದಾರೆ.

ತಾವು ಕಲಿತ ಶಾಲೆಯ ಮೇಲೆ‌ ಪ್ರೀತಿ ,ಅಭಿಮಾನ ಇರಿಸಿದ ಪ್ರವೀಣ್ ಶೆಟ್ಟಿ ದಂಪತಿ ಅವರ ಕಾರ್ಯ ಶ್ಲಾಘನೀಯ.ಅವರೊಂದಿಗೆ ಅನೇಕ ಹಳೇ ವಿದ್ಯಾರ್ಥಿಗಳೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಏಳಿಗೆಗಾಗಿ ಶ್ರಮಿಸುತ್ತಿರುವುದು ಸಂತಸದ ವಿಚಾರ ಎಂದು ಪಿಲಾರು ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟ‌ ಡಿ ಸೋಜ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

31/05/2022 10:50 am

Cinque Terre

9.4 K

Cinque Terre

1

ಸಂಬಂಧಿತ ಸುದ್ದಿ