ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಒಂದೂವರೆ ವರ್ಷದ ಬಾಲೆ!

ವರದಿ: ರಹೀಂ ಉಜಿರೆ

ಕುಂದಾಪುರ: ಜೀವನದಲ್ಲಿ ಒಂದೇ ಒಂದು ದಾಖಲೆ ಮಾಡಬೇಕೆಂದರೆ ಜೀವನಪರ್ಯಂತ ಶ್ರಮಪಡಬೇಕಾದ ಕಾಲ ಇತ್ತು. ಈಗ ಟೆಕ್ನಾಲಜಿ ಬೆರಳ ತುದಿಯಲ್ಲಿದೆ.ಮನಸು ಮಾಡಿದರೆ ಸಾಧನೆಯೂ ಸುಲಭ. ಉಡುಪಿ ಜಿಲ್ಲೆಯ ಕುಂದಾಪುರದ ಒಂದೂವರೆ ವರ್ಷದ ಪುಟ್ಟ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಸೇರಿಸುವ ಮೂಲಕ ಸುದ್ದಿಯಲ್ಲಿದ್ದಾಳೆ. ಯಾರೀ ಪೋರಿ? ನೋಡೋಣ....

ಹೀಗೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಾಡುತ್ತಿರುವ ಈ ಮುದ್ದು ಪೋರಿಯ ಹೆಸರು ಅಗಮ್ಯ ಶೆಟ್ಟಿ.ವಯಸ್ಸು ಇನ್ನೂ ಒಂದೂವರೆ ವರ್ಷ .ಈಕೆ ನೋಡುವುದಕ್ಕೆ ಎಷ್ಟು ಮುದ್ದಾಗಿದ್ದಾಳೋ ಅಷ್ಟೇ ಪ್ರತಿಭಾವಂತೆ ,ಬುದ್ಧಿವಂತೆ ಕೂಡ! ಈ ವಯಸ್ಸಲ್ಲೇ ಈ ಪುಟಾಣಿ, ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿಸಿದ್ದಾಳೆ ಎಂದರೆ ನೀವು ನಂಬಲೇಬೇಕು! ಹಾಗಾದ್ರೆ ಈಕೆಯ ಪ್ರತಿಭೆ ಏನು ಅಂತೀರಾ? ಮಹಾಭಾರತದ ಪಾತ್ರಗಳನ್ನು ನಟಿಸುವುದು, ಭಾವನೆಗಳನ್ನು ಮುಖದಲ್ಲಿ ವ್ಯಕ್ತಪಡಿಸುವುದು. ದೇವರ ಹೆಸರುಗಳನ್ನು ಗುರುತಿಸುವುದನ್ನು ಅತಿ ಸಣ್ಣ ವಯಸ್ಸಲ್ಲೇ ಮಾಡುವ ಮೂಲಕ ರಾಷ್ಡ್ರಮಟ್ಟದ ದಾಖಲೆ ಮಾಡಿದ್ದಾಳೆ.

ಈ ಪುಟಾಣಿ, ಎಂಟು ಹತ್ತು ತಿಂಗಳು ಇದ್ದಾಗಲೇ ಮನೆಯಲ್ಲಿದ್ದ 20 ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುತ್ತಿದ್ದಳಂತೆ. ಮನುಷ್ಯನ ಅಂಗಗಳು, ಪ್ರಾಣಿ ಪಕ್ಷಿಗಳ ಚಿತ್ರ ಇರುವ ಕಾರ್ಡುಗಳನ್ನು ಥಟ್ ಅಂತ ಪತ್ತೆ ಮಾಡ್ತಾಳೆ ಈ ಪುಟಾಣಿ. ಆನ್ ಲೈನ್ ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಗ್ಗೆ ಮಾಹಿತಿ ಪಡೆದ ಅಗಮ್ಯಾಳ ತಾಯಿ, ಇವೆಲ್ಲವನ್ನೂ ಚಿತ್ರೀಕರಣ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಮಗುವಿನ ಚಾಣಾಕ್ಷತನಕ್ಕೆ ತೀರ್ಪುಗಾರರು ದಾಖಲೆ ಪಟ್ಟಿಗೆ ಸೇರಿಸಿದ್ದಾರೆ.

ಅಗಮ್ಯಳಿಗೆ ಪುನೀತ್ ರಾಜಕುಮಾರ್ ಹಾಡೆಂದರೆ ಸಿಕ್ಕಾಪಟ್ಟೆ ಇಷ್ಟ-ಅವರ ಹಾಡಿಗೆ ಹೆಜ್ಜೆ ಹಾಕುತ್ತಾಳೆ. ಒಟ್ಟಾರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿಗೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈಕೆ ತನ್ನ ಹೆಸರನ್ನು ಅಚ್ಚಾಗಿಸಿದ್ದಾಳೆ.

Edited By : Nagesh Gaonkar
Kshetra Samachara

Kshetra Samachara

29/11/2021 08:59 pm

Cinque Terre

10 K

Cinque Terre

0

ಸಂಬಂಧಿತ ಸುದ್ದಿ